ಬಾಗಲಕೋಟೆ: ಮಹರ್ಷಿ ವಾಲ್ಮೀಕಿಯವರು ರಾಮರಾಜ್ಯ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಸಂತ ಎಂದ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿಜೆಪಿ ನಗರ ಮಂಡಲ ವತಿಯಿಂದ ಇಂದು ಪಕ್ಷದ ಕಾರ್ಯಾಲಯದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಪಿತೃ ವಾಕ್ಯ ಪರಿಪಾಲನೆ ,ಭಾತೃತ್ವ ,ಸಮಾನತೆ, ಮಹಿಳೆಯರಿಗೆ ಗೌರವ ನೀಡುವುದು ಸೇರಿದಂತೆ ಅನೇಕ ಸಂದೇಶಗಳನ್ನು ರಾಮಾಯಣ ಮಹಾಕಾವ್ಯದ ಮೂಲಕ ನಮಗೆ ನೀಡಿದ್ದಾರೆ ಎಂದು ಹೇಳಿದರು .
ಮೇಲ್ಮನೆ ಸದಸ್ಯ ಪಿ.ಎಚ್ . ಪೂಜಾರ , ಮಾಜಿ ಶಾಸಕ ನಾರಾಯಣಸಾ ಭಾಂಡಗೆ , ನಗರ ಮಂಡಲ ಅಧ್ಯಕ್ಷ ಸದಾನಂದ ನಾರಾ , ಜಿಲ್ಲಾ ಉಪಾಧ್ಯಕ್ಷ ರಾಜು ರೇವಣಕರ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ರೇವಣಕರ್ , ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ , ನಗರಸಭೆ ಉಪಾಧ್ಯಕ್ಷ ನಾಗರಾಜ ಬಸು ಅವರಾದು , ಬಿಟಿಡಿಎ ಸದಸ್ಯಶಿವಾನಂದ ಟವಳಿ , ವಾಲ್ಮೀಕಿ ಸಮಾಜದ ಹಿರಿಯರಾದ ಶಂಭುಗೌಡ ಪಾಟೀಲ ಇದ್ದರು.
Kshetra Samachara
09/10/2022 03:27 pm