ಬಾಗಲಕೋಟೆ : ಕಲಾ ಭವನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿರುವ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಕೆಲಕಾಲ ಗೊಂದಲ ವಾತಾವರಣ ಸೃಷ್ಟಿಯಾಗಿದೆ. ಆಮಂತ್ರಣ ಪತ್ರಿಕೆಯಲ್ಲಿ ವಾಲ್ಮೀಕಿ ಮಹಾಸಭೆ ಜಿಲ್ಲಾಧ್ಯಕ್ಷ ದ್ಯಾಮಣ್ಣ ಗಾಳಿ ಹೆಸರು ಹಾಕಿರಲಿಲ್ಲ ಎನ್ನುವ ಕಾರಣಕ್ಕೆ ಮಾತಿನ ಚಕಮಕಿ ನಡೆದು ಕೆಲಕಾಲ ಗೊಂದಲ ಸೃಷ್ಟಿಯಾಯ್ತು.
ಕಾರ್ಯಕ್ರಮ ಆರಂಭಗೊಳ್ಳುತ್ತಿದ್ದಂತೆ ಆಮಂತ್ರಣ ಪತ್ರಿಕೆಯಲ್ಲಿ ಏಕೆ ಹಾಕಿಲ್ಲ ಎಂದು ದ್ಯಾಮಣ್ಣ ಗಾಳಿ ಸೇರಿದಂತೆ ಕೆಲ ಮುಖಂಡರು ಆಕ್ಷೇಪಿಸಿದಾಗ ಗೊಂದಲ ವಾತಾವರಣ ಉಂಟಾಯ್ತು. ಆಗ ಶಾಸಕ ವೀರಣ್ಣ ಚರಂತಿಮಠ, ರಾಜು ನಾಯ್ಕರ ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿ, ಕಾರ್ಯಕ್ರಮ ಮುಂದುವರೆಸಿದರು.
PublicNext
09/10/2022 03:18 pm