ಬಾಗಲಕೋಟ: ನಗರದಲ್ಲಿ ಇಂದು ಲಾಯನ್ಸ ಕ್ಲಬ್ ಮತ್ತು ಬ್ರ್ಯಾಂಚ್ ಕ್ಲಬ್ ಬಾಗಲಕೋಟ ಇವರಿಂದ ರಕ್ತದಾನ ಬಗ್ಗೆ ಅರಿವು ಹಾಗೂ ಸ್ವಯಂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದಲ್ಲಿ ಪಾಲ್ಗೊಂಡ ಮಾಜಿ ಸಚಿವ ಎಸ್.ಆರ್. ಪಾಟೀಲ, ದಾನಗಳಲ್ಲಿಯೇ ಅತ್ಯಂತ ಶ್ರೇಷ್ಠವಾದ ರಕ್ತದಾನವನ್ನು ಎಲ್ಲ ಮಾನವರು ಕೈಗೊಂಡು ಅವಶ್ಯಕತೆ ಇರುವ ವ್ಯಕ್ತಿಗಳ ಪ್ರಾಣ ಉಳಿಸಿದ ಪುಣ್ಯಕ್ಕೆ ಪ್ರಾಪ್ತರಾಗಬೇಕು ಎಂದರು.
ಸ್ವಯಂ ಪ್ರೇರಣೆಯಿಂದ ರಕ್ತದಾನದಲ್ಲಿ ತಾವೆಲ್ಲರೂ ಭಾಗವಹಿಸಿ ತಮ್ಮ ಬಂಧುಗಳನ್ನು ಸ್ನೇಹಿತರನ್ನು ಸಹ ಈ ಕಾರ್ಯದಲ್ಲಿ ಪ್ರೇರೆಪಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದರು.
Kshetra Samachara
02/10/2022 10:13 pm