ಬಾಗಲಕೋಟೆ: ಉತ್ತರ ಕರ್ನಾಟಕ ಹುಡುಗ ಪ್ರಥಮ ಬಾರಿಗೆ ನಾಯಕ ನಟನಾಗಿ ನಟಿಸಿರುವ ಚಾಂಪಿಯನ್ ಚಲನಚಿತ್ರವು ನಾಳೆ ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಕಲಾವಿದ ಆರ್.ಡಿ.ಬಾಬು ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿ, ಚಾಂಪಿಯನ್ ಚಿತ್ರವು ಅತೀ ಹೆಚ್ಚಿನ ಬಜೆಟ್ ಸಿನಿಮಾವಾಗಿದ್ದು , ಉತ್ತರ ಕರ್ನಾಟಕದ ಬೆಳಗಾವಿಯ ಯುವ ಪ್ರತಿಭೆ ಸಚಿನ ಮೊದಲ ಬಾರಿಗೆ ನಟನಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಹಿರಿಯ ನಟ ದೇವರಾಜ್ , ಹಾಸ್ಯ ನಟ ಚಿಕ್ಕಣ್ಣ , ನಟಿ ಆದಿತ್ಯೆ ಪ್ರಭುದೇವ ಇದ್ದು , ದುಬೈ , ಬೆಂಗಳೂರಿನಲ್ಲಿ ಚಿತ್ರೀಕರಣವಾಗಿದೆ . ಸುಮಾರು 150 ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದ್ದು , ಬಾಗಲಕೋಟೆಯ ನವನಗರದ ಚಂದನ ಚಿತ್ರದಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದರು.
ಚಾಂಪಿಯನ್ ಚಿತ್ರವು ಅನಾರೋಗ್ಯದಿಂದ ಬಳಲುತ್ತಿರುವ ಪೊಲೀಸನ ಮಗ ಜೀವನದಲ್ಲಿ ಸಾಧನೆ ಮಾಡುವ ಮೂಲಕ ಚಾಂಪಿಯನ್ ಆಗುವ ಸುಂದರ ಕಥಾವಸ್ತುವನ್ನು ಒಳಗೊಂಡಿದೆ . ಉತ್ತಮ ಸಂಗೀತ ಇದ್ದು ಪ್ರೇಕ್ಷಕರಿಗೆ ರಂಜಿಸಲಿದೆ ಎಂದರು.
PublicNext
13/10/2022 07:45 pm