ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಟಿಪ್ಪರ್ - ಬೈಕ್ ಮುಖಾಮುಖಿ ಡಿಕ್ಕಿ : ಇಬ್ಬರು ಸಾವು

ಬಾಗಲಕೋಟೆ: ಟಿಪ್ಪರ್ - ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ರಾಯಚೂರು - ಬೆಳಗಾವಿ ಹೆದ್ದಾರಿಯ ಖಜ್ಜೆಡೋಣಿ ಗ್ರಾಮದ ಬಳಿಯ ದುರ್ಘಟನೆ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟರನ್ನು ಹನಮಂತ ಪೂಜಾರ ( 27 ) , ಮಹಾದೇವಪ್ಪ ಅಂಬಿಗೇರ ( 29 ) ಗುರುತಿಸಲಾಗಿದೆ. ಮೃತ ಹನುಮಂತ , ಮಹಾದೇವಪ್ಪ , ಶಾರದಾಳ ಗ್ರಾಮದ ನಿವಾಸಿಗಳಾಗಿದ್ದಾರೆಂದು ತಿಳಿದು ಬಂದಿದೆ .

ಇಬ್ಬರು ಬೈಕ್ ನಲ್ಲಿ ಲೋಕಾಪುರ ದಿಂದ ಕಲಾದಗಿ ಕಡೆಗೆ ಹೊರಟಿದ್ದರು ಎನ್ನಲಾಗುತ್ತಿದ್ದು , ಈ ಘಟನೆಗೆ ಟಿಪ್ಪರ್ ಚಾಲಕನ ನಿರ್ಲಕ್ಷ್ಯ ಕಾರಣ ಎಂದು ಹೇಳಲಾಗುತ್ತಿದೆ . ಈ ಘಟನಾ ಸ್ಥಳಕ್ಕೆ ಲೋಕಾಪುರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ .

Edited By : Nagaraj Tulugeri
Kshetra Samachara

Kshetra Samachara

12/10/2022 10:39 pm

Cinque Terre

10.92 K

Cinque Terre

0