ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕು ವರ್ಚಗಲ್ ಗ್ರಾಮದಲ್ಲಿಸಿಡಿಲು ಬಡಿದು ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ. ಕೃಷ್ಣಪ್ಪ ಗುಡದನ್ನವರ (30) ಸಾವನ್ನಪ್ಪಿದ ಯುವಕ.
ಹೊಲದಲ್ಲಿ ಬಿರುಸಿನ ಮಳೆಯಲ್ಲಿ ಈರುಳ್ಳಿಗೆ ತಾಡಪಲ್ ಹೊದಿಸುವಾಗ ಬಡಿದ ಸಿಡಿಲಿಗೆ ಬಲಿಯಾಗಿದ್ದಾನೆ. ಘಟನೆ ಬೆನ್ನಲ್ಲೆ ಲೋಕಾಪೂರ ಉಪತಹಶೀಲ್ದಾರ ಮಹೇಶ ಪಾಂಡವ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಲೋಕಾಪೂರ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Kshetra Samachara
12/10/2022 06:21 pm