ಮೇಷ: ಅನಿರೀಕ್ಷಿತ ಅತಿಥಿಯ ಆಗಮನ. ಆರೋಗ್ಯದ ಕಡೆ ನಿಗಾ ಇರಲಿ. ಕಚೇರಿಯಲ್ಲಿ ಮೇಲಧಿಕಾರಿಯಿಂದ ಪ್ರಶಂಸೆ.
ವೃಷಭ: ಜೀವನದ ಕನಸಿನ ಸಾಕಾರ. ಮಕ್ಕಳ ವಿಷಯದಲ್ಲಿ ಅಸಡ್ಡೆ ತಾಳುವುದು ಒಳ್ಳೆಯದಲ್ಲ. ಸಹೋದ್ಯೋಗಿಗಳಿಂದ ಪ್ರಶಂಸೆ.
ಮಿಥುನ: ವೈದ್ಯರ ಸಲಹೆಯನ್ನು ತಿರಸ್ಕರಿಸಬೇಡಿ. ಬಹಳ ದಿನಗಳಿಂದ ಇದ್ದ ರೋಗ ಉಲ್ಬಣ. ಆತ್ಮೀಯರೊಂದಿಗೆ ವಿಹಾರ.
ಕಟಕ: ಪತ್ನಿಯೊಂದಿಗೆ ಮನಸ್ತಾಪ. ಮನೆ ಕಟ್ಟುವ ಕೆಲಸಕ್ಕೆ ಚಾಲನೆ. ಕುಟುಂಬದೊಂದಿಗೆ ಕೂತು ಮಾತನಾಡುವುದು ಒಳ್ಳೆಯದು.
ಸಿಂಹ: ಕೃಷಿ ಚಟುವಟಿಕೆಗೆ ಚಾಲನೆ. ವ್ಯಾಪಾರಸ್ಥರಿಗೆ ಅಧಿಕ ಲಾಭ. ಆತ್ಮೀಯ ಸ್ನೇಹಿತನ ಭೇಟಿ. ದಿನಾಂತ್ಯದಲ್ಲಿ ಆಯಾಸ.
ಕನ್ಯಾ: ತಪ್ಪು ನಿರ್ಧಾರಗಳಿಂದ ಸಮಸ್ಯೆ. ವ್ಯಾಪಾರ ವಹಿವಾಟುಗಳಲ್ಲಿ ಕೆಲಸಗಾರರ ಸಮಸ್ಯೆ. ಆತ್ಮೀಯರೊಂದಿಗೆ ಭೋಜನ.
ತುಲಾ: ಸಾರ್ವಜನಿಕ ಜೀವನದಲ್ಲಿ ಮಹತ್ವದ ಜವಾಬ್ದಾರಿ. ಕೊಟ್ಟ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿ. ಕಲಾವಿದರಿಗೆ ವಿಶೇಷ ಸುದ್ದಿ.
ವೃಶ್ಚಿಕ: ಅಪರೂಪದ ವ್ಯಕ್ತಿಯನ್ನು ಭೇಟಿ ಮಾಡುವಿರಿ. ಕುಟುಂಬದೊಂದಿಗೆ ತಾಳ್ಮೆಯಿಂದ ವರ್ತಿಸಿ. ಮಕ್ಕಳಿಗೆ ಸರಿಯಾದ ಸಲಹೆ ನೀಡಿ.
ಧನುಸ್ಸು: ಹಳೆಯ ವಿಚಾರಗಳನ್ನು ಕೆದಕಬೇಡಿ. ಸಕಾರಾತ್ಮಕ ಚಿಂತನೆಯಿಂದ ದೂರ ಇರಿ. ಧಾರ್ವಿುಕ ಕ್ಷೇತ್ರಗಳಿಗೆ ಭೇಟಿ.
ಮಕರ: ಕುಟುಂಬದ ಸಮಸ್ಯೆಯನ್ನು ಹಿತೈಷಿಗಳೊಂದಿಗೆ ಹಂಚಿಕೊಳ್ಳಿ. ಪರಿಹಾರ ಸಿಗುತ್ತದೆ. ಆಕಸ್ಮಿಕ ಧನಲಾಭ. ಖರೀದಿಯಲ್ಲಿ ಮೋಸ.
ಕುಂಭ: ಸಂಗಾತಿಯೊಂದಿಗೆ ಮೃದುವಾಗಿ ವರ್ತಿಸಿ. ಬಹು ದಿನಗಳಿಂದ ನಿರೀಕ್ಷಿಸಿದ ಅವಕಾಶ ಪ್ರಾಪ್ತಿ. ಕಚೇರಿಯಲ್ಲಿ ಪ್ರಶಂಸೆ ದೊರೆಯಲಿದೆ.
ಮೀನ: ವ್ಯಾಪಾರದಲ್ಲಿ ವಿಶೇಷ ಲಾಭ. ಕುಟುಂಬದೊಂದಿಗೆ ವಿಹಾರ. ಮಕ್ಕಳ ವಿಷಯದಲ್ಲಿ ಮೃದುವಾಗಿ ವರ್ತಿಸುವುದು ಉತ್ತಮ.
PublicNext
19/07/2022 07:02 am