ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: ರವಿವಾರ 24 ಏಪ್ರಿಲ್ 2022

ಮೇಷ ರಾಶಿ: ಈ ರಾಶಿಯ ಜನರು ಭಾನುವಾರ ಮೌನವಾಗಿರುವುದು ಉತ್ತಮ. ಅಗತ್ಯವಿರುವಷ್ಟು ಮಾತ್ರ ಮಾತನಾಡಿ. ಕೆಲಸದ ಮೇಲೆ ಹೆಚ್ಚಿನ ಗಮನಹರಿಸುವ ಅವಶ್ಯಕತೆಯಿದೆ. ಈ ರೀತಿ ಮಾಡುವುದರಿಂದ ಮಾತ್ರ ನಿಮ್ಮ ಕೆಲಸವು ಗುಣಮಟ್ಟಕ್ಕೆ ಅನುಗುಣವಾಗಿರುತ್ತದೆ. ನಿಮ್ಮ ತಂದೆಯ ಆರೋಗ್ಯ ಹದಗೆಡಬಹುದು.

ವೃಷಭ ರಾಶಿ: ನೀವು ಅನಗತ್ಯವಾಗಿ ಭವಿಷ್ಯವನ್ನು ಕಲ್ಪಿಸಿಕೊಳ್ಳಬಾರದು. ವರ್ತಮಾನದ ಬಗ್ಗೆ ಮಾತ್ರ ಚಿಂತಿಸಿ. ವೈದ್ಯಕೀಯ ವೃತ್ತಿಗೆ ಸಂಬಂಧಿಸಿದ ಜನರು ವ್ಯಾಪಾರ ವಿಷಯಗಳಲ್ಲಿ ಲಾಭವನ್ನು ಪಡೆಯಬಹುದು. ಯುವಕರು ಇತರರ ಮಾತನ್ನು ನೇರವಾಗಿ ನಂಬಬಾರದು, ಬದಲಿಗೆ ಅವರ ಮಾತಿನಲ್ಲಿ ಎಷ್ಟು ಶಕ್ತಿ ಇದೆ ಎಂಬುದನ್ನು ಮೊದಲು ಪರಿಗಣಿಸಬೇಕು.

ಮಿಥುನ ರಾಶಿ: ನೀವು ಹೊಸ ಉದ್ಯೋಗ ಹುಡುಕುತ್ತಿದ್ದರೆ ಈ ಸಮಯವು ಅನುಕೂಲಕರವಾಗಿರುತ್ತದೆ. ವ್ಯಾಪಾರಿಗಳಿಗೆ ನಷ್ಟ ಉಂಟಾಗಬಹುದು. ವ್ಯವಹಾರದ ವಿಷಯದಲ್ಲಿ ಇವರು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಕುಟುಂಬದ ಹಿರಿಯರ ಮಾತುಗಳನ್ನು ಪಾಲಿಸಬೇಕು. ನಿಮಗೆ ಸಾಧ‍್ಯವಾಷ್ಟು ಬೇರೆಯವರಿಗೆ ಸಹಾಯ ಮಾಡಿ.

ಕರ್ಕ ರಾಶಿ: ಈ ರಾಶಿಯ ಜನರಿಗೆ ಭಾನುವಾರ ಹೂಡಿಕೆಗೆ ಒಳ್ಳೆಯದು. ಯಾವಾಗಲೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಮಗು ಸೇರಿದಂತೆ ಮನೆಯವರ ಆರೋಗ್ಯದ ಬಗ್ಗೆಯೂ ಗಮನಹರಿಸಿ. ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳ ಬಗ್ಗೆ ಜಾಗರೂಕರಾಗಿರಬೇಕು, ಅಧ್ಯಯನದ ಮೇಲೆ ಸಂಪೂರ್ಣ ಗಮನ ಹರಿಸಬೇಕು.

ಸಿಂಹ ರಾಶಿ: ಈ ರಾಶಿಯ ಜನರು ಭಾನುವಾರ ಕ್ಷಣಿಕ ಕೋಪಕ್ಕೆ ಗುರಿಯಾಗಬಹುದು. ಆದರೆ, ತಮ್ಮ ಮಾತಿನ ಮೇಲೆ ಸಂಯಮ ಇಟ್ಟುಕೊಳ್ಳಬೇಕು. ಜಮೀನು ವ್ಯಾಪಾರ ಮಾಡುವವರಿಗೆ ಲಾಭವಾಗುವ ಪರಿಸ್ಥಿತಿ ಇದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನಿಮ್ಮ ಮನಸ್ಸಿಗೆ ಶಾಂತಿ ದೊರೆಯುತ್ತದೆ.

ಕನ್ಯಾ ರಾಶಿ: ಈ ರಾಶಿಯ ಜನರು ನಕಾರಾತ್ಮಕತೆಯಿಂದ ದೂರವಿದ್ದು ಧನಾತ್ಮಕತೆಗೆ ಪ್ರಾಮುಖ್ಯತೆ ನೀಡಬೇಕು. ಈ ಭಾನುವಾರ ನಿಮಗೆ ಒಳ್ಳೆಯ ಸುದ್ದಿ ಸಿಗಬಹುದು. ಹೊಸ ಉದ್ಯೋಗ ಪ್ರಸ್ತಾಪ ಪತ್ರವೂ ಬರಬಹುದು. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಪ್ರಾರಂಭಿಸಿ.

ತುಲಾ ರಾಶಿ: ಭಾನುವಾರದಂದು ಈ ರಾಶಿಚಕ್ರದ ಜನರು ಇತರ ಜನರೊಂದಿಗೆ ಹೊಂದಾಣಿಕೆಯ ವಿಚಾರದಲ್ಲಿ ಅಸಮಾಧಾನಗೊಳ್ಳಬಹುದು. ಕಚೇರಿ ವಿವಾದಗಳಲ್ಲಿ ಸಿಲುಕಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಜವಾಬ್ದಾರಿಗಳನ್ನು ಸುಲಭವಾಗಿ ನಿರ್ವಹಿಸಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು.

ವೃಶ್ಚಿಕ ರಾಶಿ: ಈ ರಾಶಿಯ ಜನರು ಅನುಮಾನದಿಂದ ದೂರವಿರಬೇಕು. ಸಂದೇಹದಲ್ಲಿ ನಿಮ್ಮ ಮನಸ್ಸು ಶಾಂತವಾಗಿರಲು ಸಾಧ್ಯವಿಲ್ಲ. ವ್ಯಾಪಾರದ ದೃಷ್ಟಿಕೋನದಿಂದ ಚಿಲ್ಲರೆ ವ್ಯಾಪಾರಿಗಳು ಲಾಭ ಗಳಿಸಬಹುದು. ಕಲಾ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರು ಸಮಾಜದಲ್ಲಿ ಉತ್ತಮ ಹೆಸರನ್ನು ಗಳಿಸುತ್ತಾರೆ.

ಧನು ರಾಶಿ: ಭಾನುವಾರದಂದು ಈ ರಾಶಿಯ ಜನರು ಎಲ್ಲರ ಜೊತೆಗೆ ಉತ್ತಮ ಒಡನಾಟ ಹೊಂದಬೇಕು. ಎಲ್ಲರೊಂದಿಗೆ ಒಟ್ಟಿಗೆ ಕೆಲಸ ಮಾಡುವುದು ವಿಭಿನ್ನವಾದ ಸಂತೋಷ ನೀಡುತ್ತದೆ. ಬಾಕಿ ಇರುವ ಕೆಲಸಗಳನ್ನು ಪಟ್ಟಿ ಮಾಡಿ ಪೂರ್ಣಗೊಳಿಸಬೇಕು. ವ್ಯವಹಾರದಲ್ಲಿ ಲಾಭ ಗಳಿಸುವ ಪರಿಸ್ಥಿತಿ ಇದೆ.

ಮಕರ ರಾಶಿ: ಈ ರಾಶಿಯ ಜನರು ತಮ್ಮ ನಿಶ್ಚಿತ ಗುರಿಯತ್ತ ಗಮನ ಹರಿಸಬೇಕು. ವ್ಯವಹಾರದಲ್ಲಿ ನಿಮ್ಮ ಪಾಲುದಾರರ ಮೂಲಕ ನೀವು ಲಾಭ ಪಡೆಯುವ ಸಾಧ್ಯತೆಯಿದೆ. ಈ ರಾಶಿಯ ವಿವಾಹವಾಗುವ ಹೆಣ್ಣುಮಕ್ಕಳ ಮದುವೆ ನಿಶ್ಚಯವಾಗಬಹುದು, ಪ್ರಯತ್ನ ನಡೆಯಬೇಕು. ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಪ್ರಗತಿ ಸಾಧ್ಯತೆ ಇದೆ. ಇವರು ದೊಡ್ಡ ನಾಯಕರೊಂದಿಗೆ ಸಂಪರ್ಕ ಹೆಚ್ಚಿಸಿಕೊಳ್ಳಬೇಕು.

ಕುಂಭ ರಾಶಿ: ಈ ಭಾನುವಾರ ಯಾವುದೇ ಮಹತ್ವದ ನಿರ್ಧಾರ ತರಾತುರಿಯಲ್ಲಿ ತೆಗೆದುಕೊಳ್ಳುವುದು ಸರಿಯಲ್ಲ. ನೀವು ಏನು ಮಾಡಬೇಕೆಂದುಕೊಂಡಿದ್ದೀರೋ ಅದನ್ನು ಸಾಕಷ್ಟು ಯೋಚಿಸಿದ ನಂತರ ಮಾಡಿ. ಪಿತೂರಿಯಲ್ಲಿ ಸಿಲುಕಿಕೊಳ್ಳದಿರಲು, ನೀವು ಯಾವುದೇ ಕೆಲಸವನ್ನು ಬಹಳ ಎಚ್ಚರಿಕೆಯಿಂದ ಮಾಡುವುದು ಅವಶ್ಯಕ. ನೀವು ದೊಡ್ಡ ಉದ್ಯಮಿಯಾಗಿದ್ದರೆ ನಿಮ್ಮ ವ್ಯವಹಾರಕ್ಕೆ ಇದು ಸರಿಯಾದ ಸಮಯ ಎಂದು ಅರ್ಥಮಾಡಿಕೊಳ್ಳಿ.

ಮೀನ ರಾಶಿ: ಈ ರಾಶಿಯವರಿಗೆ ಕೆಲವು ಶುಭ ಮಾಹಿತಿ ದೊರೆಯಲಿದ್ದು, ಇದರಿಂದ ಮನಸ್ಸಿಗೆ ಸಂತೋಷವಾಗುತ್ತದೆ. ವ್ಯಾಪಾರಿಗಳಿಗೆ ಉತ್ತಮ ಲಾಭದ ಸಾಧ್ಯತೆಗಳಿವೆ. ಸಂಗಾತಿಯೊಂದಿಗೆ ಹೊಂದಾಣಿಕೆಯಾಗದ ಪರಿಸ್ಥಿತಿ ಇದೆ. ಈ ರಾಶಿಯವರು ಭಾನುವಾರ ಏನನ್ನಾದರೂ ಖರೀದಿಸಬೇಕು.

Edited By : Nagaraj Tulugeri
PublicNext

PublicNext

24/04/2022 08:05 am

Cinque Terre

18.92 K

Cinque Terre

0