ಮೇಷ: ವ್ಯಾಪಾರದಲ್ಲಿ ಲಾಭ ನಷ್ಟದ ಮಿಶ್ರಫಲ. ಕೃಷಿಗೆ ಸಂಬಂಧಪಟ್ಟ ಕಾರ್ಯಗಳನ್ನು ಬಿಡುವಿಲ್ಲದೆ ನಡೆಸುವುದು ಉತ್ತಮ.
ವೃಷಭ: ನಿಮ್ಮಲ್ಲಿರುವ ಪಾರಮಾರ್ಥಿಕತೆ ವ್ಯವಹಾರದ ಯಶಸ್ಸಿಗೆ ಕಾರಣವಾಗಲಿದೆ. ಸರ್ಕಾರಿ ಕೆಲಸಕ್ಕೆ ಹೆಚ್ಚು ಅಲೆದಾಡುವಂತಾಗಲಿದೆ.
ಮಿಥುನ: ಮಾತುಕತೆ ಮೂಲಕ ಕಾರ್ವಿುಕರ ಸಮಸ್ಯೆ ನಿವಾರಣೆ. ಪೆಟ್ರೋಲ್ ವ್ಯಾಪಾರದಲ್ಲಿ ಲಾಭ. ಕೊಟ್ಟ ಹಣ ಕೈಸೇರದಿರುವ ಸಾಧ್ಯತೆ.
ಕಟಕ: ರಾಜಕೀಯ ವ್ಯವಹಾರಗಳ ಆಕಾಂಕ್ಷಿಯಾಗಿರುವ ನೀವು ಇನ್ನಷ್ಟು ಚುರುಕಾಗಬೇಕಾಗಿದೆ. ಖರೀದಿಯಲ್ಲಿ ಮೋಸ ಸಾಧ್ಯತೆ.
ಸಿಂಹ: ವೃತ್ತಿರಂಗದಲ್ಲಿ ಅಭಿವೃದ್ಧಿಯಾದರೂ ವಿಘ್ನ ಭೀತಿ. ಒಳಗೊಳಗೆ ಅಸೂಯೆ ಪಡುವ ಸಂಬಂಧಿಗಳು ಸಾಧನೆಗೆ ಅಡ್ಡಿ ತಂದಾರು.
ಕನ್ಯಾ: ಸಂಗಾತಿಯ ಸಲಹೆಗೆ ಗಮನ ಕೊಡಿ. ಸ್ನೇಹಿತರಲ್ಲಿ ಮನಸ್ತಾಪ ಬರದಂತೆ ನೋಡಿಕೊಳ್ಳಿ. ಮಕ್ಕಳ ಮಾತು ಗೊಂದಲ ಸೃಷ್ಟಿಸೀತು.
ತುಲಾ: ಬುದ್ಧಿವಂತಿಕೆಯಿಂದ ಬೆಟ್ಟದಂತಹ ಸಮಸ್ಯೆಗಳು ಪರಿಹಾರ ಕಾಣಲಿವೆ. ನಿಮ್ಮ ಕೆಲಸಕ್ಕೆ ಹೆಚ್ಚಿನ ಪ್ರಚಾರ ಲಭಿಸುವುದು.
ವೃಶ್ಚಿಕ: ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಕಾರ್ಯರಂಗದಲ್ಲಿ ನಿಮ್ಮ ಶ್ರದ್ಧೆೆ ಮತ್ತು ಶ್ರಮಕ್ಕೆ ತಕ್ಕ ಫಲವನ್ನು ನಿರೀಕ್ಷಿಸಬಹುದು.
ಧನಸ್ಸು: ನಿರುದ್ಯೋಗಿಗಳಿಗೆ ಉದ್ಯೋಗ ಸಾಧ್ಯತೆ. ರಾಜಕೀಯ ದವರಿಗೆ ಅಧಿಕಾರ ತಪ್ಪುವ ಭೀತಿ. ಸತ್ಪಲಗಳಿಗಾಗಿ ಶಾರದೆಯನ್ನು ಸ್ಮರಿಸಿ.
ಮಕರ: ಆರಕ್ಷಕ ಸಿಬ್ಬಂದಿಗೆ ಕೆಲಸದ ಒತ್ತಡ. ಇತರರ ಮಾತಿಗೆ ಕಿವಿಗೊಡದೆ ಇರುವುದು ಉತ್ತಮ. ಮನೆಯಲ್ಲಿ ಮಕ್ಕಳಿಂದ ಸಂಭ್ರಮ.
ಕುಂಭ: ಕೆಲವು ನಿರ್ಧಾರದಲ್ಲಿ ಇತರರ ಸಲಹೆ ಪಡೆದು, ಯೋಚಿಸಿ ಉತ್ತರ ನೀಡುವುದು ಉತ್ತಮ. ಉದ್ಯೋಗದಲ್ಲಿ ಹೆಚ್ಚಿದ ಜವಾಬ್ದಾರಿ.
ಮೀನ: ಪಾಲುದಾರಿಕೆಯಲ್ಲಿ ಲಾಭ. ಮಹಿಳೆಯರಿಗೆ ಇಷ್ಟಾರ್ಥ ಸಿದ್ಧಿ. ಆಕಸ್ಮಿಕ ಪ್ರಯಾಣ. ಸಮಸ್ಯೆಗೆ ಸುಲಭವಾಗಿ ಉತ್ತರ ಸಿಗುವುದು.
PublicNext
26/02/2022 07:18 am