ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ 21.1.2022

ಮೇಷ: ನಿಮ್ಮ ಜನಪ್ರಿಯತೆಯು ಹೆಚ್ಚಾಗಲಿದೆ. ವೃತ್ತಿಪರವಾಗಿ ಕೆಲಸಗಳು ಸುಗಮವಾಗಿರುತ್ತವೆ. ಆದಾಯವು ಹೆಚ್ಚಾಗುವ ಯೋಗವಿದೆ.

ವೃಷಭ: ಉತ್ತಮ ದಿನಗಳಲ್ಲಿ ಒಂದಾಗಬಹುದು. ಕೆಲಸದ ಸ್ಥಳದಲ್ಲಿ ಮಾಡಿದ ಪ್ರಯತ್ನಗಳು ಭವಿಷ್ಯದ ಪ್ರಗತಿಗೆ ಕೊಡುಗೆ ನೀಡುತ್ತವೆ.

ಮಿಥುನ: ಮಹಾತ್ವಾಕಾಂಕ್ಷೆಯ ಸಾಹಸಕ್ಕೆ ಯಶಸ್ಸು. ವ್ಯಾಸಂಗ, ಉದ್ಯೋಗ ಅಥವಾ ವ್ಯಾಪಾರ ನಿಮಿತ್ತ ವಿದೇಶಕ್ಕೆ ಹೋಗಲು ಅವಕಾಶ.

ಕಟಕ: ಕೆಲಸದ ಸ್ಥಳದಲ್ಲಿ ತೆಗೆದುಕೊಳ್ಳುವ ಕೊನೆ ಕ್ಷಣದ ನಿರ್ಧಾರ ಬದಲಾವಣೆಗೆ ಕಾರಣ ಆಗಬಹುದು. ನಿರೀಕ್ಷಿತ ಯಶ ಸಾಧಿಸುವಿರಿ.

ಸಿಂಹ: ವೃತ್ತಿಯಲ್ಲಿ ಫಲಿತಾಂಶ ಪಡೆಯಲು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಮೇಲಧಿಕಾರಿಗಳು ಗೊಂದಲಗೊಳಿಸಬಹುದು.

ಕನ್ಯಾ: ವ್ಯಾಪಾರದಲ್ಲಿ ಕೆಲ ಸಮಸ್ಯೆಗಳು ಎದುರಾಗಬಹುದು. ಆದರೆ ಆದಾಯದಲ್ಲಿ ಹೆಚ್ಚಳ ಸಾಧ್ಯ. ವೈವಾಹಿಕ ಜೀವನವು ಆಹ್ಲಾದಕರ.

ತುಲಾ: ಕಚೇರಿ ಕೆಲಸಗಳನ್ನು ಸಮರ್ಪಣಾ ಭಾವದಿಂದ ನಿರ್ವಹಿಸಿ. ಫಲಿತಾಂಶ ಧನಾತ್ಮಕವಾಗಿರುತ್ತದೆ. ಕುಟುಂಬದಲ್ಲಿ ವಾಗ್ವಾದ.

ವೃಶ್ಚಿಕ: ನಿಮ್ಮ ಪ್ರಯತ್ನದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಕಚೇರಿಯಲ್ಲಿ ಪ್ರಶಂಸೆ ಇರುತ್ತದೆ. ಕುಟುಂಬದ ಬೆಂಬಲವನ್ನು ಪಡೆಯುತ್ತೀರಿ.

ಧನಸ್ಸು: ವ್ಯಾಪಾರ ಸಂದರ್ಭದಲ್ಲಿ ಸ್ವಲ್ಪ ದೂರದ ಪ್ರಯಾಣ ಎದುರಾಗಬಹುದು. ಯಾವುದೇ ಪರಿಸ್ಥಿತಿಯಲ್ಲಿ ಯಶಸ್ವಿಯಾಗುತ್ತೀರಿ.

ಮಕರ: ಅದೃಷ್ಟವು ಅನುಕೂಲವಾಗಿದೆ. ಸಹೋದ್ಯೋಗಿ ಗಳೊಂದಿಗೆ ಸಂವಹನ ನಡೆಸುವಾಗ, ಎಚ್ಚರ. ಕುಟುಂಬದ ಜತೆೆ ಪ್ರವಾಸ.

ಕುಂಭ: ಧೈರ್ಯ, ಆತ್ಮವಿಶ್ವಾಸವು ಅತ್ಯುನ್ನತ ಮಟ್ಟದಲ್ಲಿ ಉಳಿ ಯುವುದು. ಪ್ರಗತಿಪರ ಬದಲಾವಣೆಗಳು ಅದ್ಭುತ ತಿರುವು ನೀಡುತ್ತವೆ.

ಮೀನ: ಬದಲಾವಣೆಗೆ ಒಳ್ಳೆಯ ಸಮಯವಲ್ಲ. ಆರ್ಥಿಕವಾಗಿ, ನೀವು ಹಿಂದೆ ಮಾಡಿದ ಕಠಿಣ ಪರಿಶ್ರಮದ ಪ್ರತಿಫಲ ಪಡೆಯಬಹುದು.

Edited By : Vijay Kumar
PublicNext

PublicNext

21/01/2022 08:05 am

Cinque Terre

19.78 K

Cinque Terre

0