ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನಭವಿಷ್ಯ: ಶುಕ್ರವಾರ, 03 ಡಿಸೆಂಬರ್ 2021

ಮೇಷ: ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ನೀವು ಮಾತನಾಡುವ ಕಲೆಯನ್ನು ಹೊಂದಿದ್ದೀರಿ, ಅದು ನಿಮ್ಮನ್ನು ಯಾವುದೇ ಕ್ಷೇತ್ರದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುತ್ತಾರೆ.

ವೃಷಭ: ಅದೃಷ್ಟ ನಿಮ್ಮ ಜೊತೆಗಿದೆ . ಮಗಳ ಕಾರ್ಯದಲ್ಲಿ ಭಾಗವಹಿಸುವಿರಿ. ನಿಮ್ಮ ಮಾತು ಮಧುರವಾಗಿರುತ್ತದೆ, ಇದರಿಂದಾಗಿ ನೀವು ಇತರರನ್ನು ನಿಮ್ಮ ಕಡೆಗೆ ಆಕರ್ಷಿಸುತ್ತೀರಿ. ಬುದ್ಧಿವಂತಿಕೆಯಿಂದ ನಿಮ್ಮ ಕೆಲಸವನ್ನು ಮಾಡಿ ಯಶಸ್ವಿಯಾಗುತ್ತೀರಿ. ಕಾರ್ಯ ಕ್ಷೇತ್ರದಲ್ಲಿ ನಿರೀಕ್ಷಿತ ಯಶಸ್ಸು ದೊರೆಯಲಿದೆ.

ಮಿಥುನ: ಇಂದಿನ ದಿನ ತುಂಬಾ ಚೆನ್ನಾಗಿರುವುದಿಲ್ಲ. ನೀವು ಸಂಘರ್ಷದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಅಂತಹ ಸಮಯದಲ್ಲಿ ಕುಟುಂಬದ ಬೆಂಬಲವನ್ನು ಪಡೆಯುತ್ತೀರಿ. ಹಾಗಾಗಿ ಮುಂದೆ ಬರುವ ಕಠಿಣ ಪರಿಸ್ಥಿತಿಯನ್ನು ಎದುರಿಸಿ, ಸೋಲೊಪ್ಪಿಕೊಳ್ಳಬೇಡಿ. ಆರೋಗ್ಯವು ಸಾಮಾನ್ಯವಾಗಿರುತ್ತದೆ.

ಕರ್ಕ: ನಿಮ್ಮ ದಿನವು ಉತ್ತಮವಾಗಿ ಪ್ರಾರಂಭವಾಗಲಿದೆ. ಕೆಲಸ ಅಥವಾ ಕುಟುಂಬ ಸಂತೋಷದ ವಿಷಯವಾಗಿರಲಿ ದಿನವು ಉತ್ತಮವಾಗಿರುತ್ತದೆ. ಅದೃಷ್ಟವು ಬೆಂಬಲ ನೀಡಲಿದೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಂಭವವಿದ್ದು, ಕಾರ್ಯಕ್ಷೇತ್ರದಲ್ಲಿ ಲಾಭವಾಗಲಿದೆ.

ಸಿಂಹ: ಉತ್ಸಾಹದಿಂದ ಕಾಣುವಿರಿ. ಅದೃಷ್ಟ ನಿಮ್ಮ ಜೊತೆಗಿರಲಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ.

ಕನ್ಯಾ: ನಿಮ್ಮ ಕೆಲಸದಲ್ಲಿ ಉತ್ತಮ ಲಾಭ ಸಿಗಲಿದೆ. ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗಲಿದೆ. ನಿಮ್ಮ ಸಂಗಾತಿ ಮತ್ತು ಮಕ್ಕಳಿಂದ ಆಹ್ಲಾದಕರ ಸುದ್ದಿಯನ್ನು ಪಡೆಯಲಿದ್ದೀರಿ. ನಿಮ್ಮ ಕುಟುಂಬದಲ್ಲಿ ನಡೆಯುತ್ತಿರುವ ಶುಭ ಕಾರ್ಯಗಳಿಂದ ಸಂತೋಷವಾಗಲಿದೆ.

ತುಲಾ: ಕೆಲಸದಲ್ಲಿ ಯಶಸ್ಸು ಸಿಗಲಿದೆ. ಹೊಸ ವ್ಯವಹಾರವನ್ನು ಪ್ರಾರಂಭಿಸುವ ಆಲೋಚನೆಗಳು ಮನಸ್ಸಿಗೆ ಬರಬಹುದು. ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ. ಕೆಲಸದ ಕ್ಷೇತ್ರದಲ್ಲಿ ಶುಕ್ರವಾರ ಲಾಭದಾಯಕವೆಂದು ಸಾಬೀತಾಗಲಿದೆ.

ವೃಶ್ಚಿಕ: ಕೌಟುಂಬಿಕ ಜೀವನ ಏರಿಳಿತಗಳಿಂದ ಕೂಡಿರುತ್ತದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ತಿಳುವಳಿಕೆಯು ಜೀವನವನ್ನು ಸಂತೋಷಪಡಿಸಲು ಸಹಾಯ ಮಾಡುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ನಿಮ್ಮ ಅದೃಷ್ಟ ಚೆನ್ನಾಗಿರುತ್ತದೆ. ನಿಮ್ಮ ಸ್ನೇಹಿತರು ಮತ್ತು ಪರಿಚಯಸ್ಥರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ.

ಧನು : ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ಪ್ರಯಾಣ ಇತ್ಯಾದಿಗಳನ್ನು ಆನಂದಿಸುವಿರಿ. ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ಪ್ರತಿಯೊಂದು ಕಾರ್ಯವನ್ನು ಚಾಣಾಕ್ಷತೆಯಿಂದ ಅತ್ಯಂತ ಸುಲಭವಾಗಿ ಪೂರ್ಣಗೊಳಿಸುವಿರಿ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಮಕರ : ಈ ದಿನ ನಿಮಗೆ ಸ್ಮರಣೀಯವಾಗಿರುತ್ತದೆ. ಮಧುರವಾದ ಮಾತಿನ ಸಹಾಯದಿಂದ ಮತ್ತು ನಿಮ್ಮ ಬುದ್ಧಿವಂತಿಕೆಯಿಂದ ಕೆಲಸದಲ್ಲಿ ಯಶಸ್ಸನ್ನು ಸಾಧಿಸುವಿರಿ. ದಿನವು ಉತ್ತಮವಾಗಿ ಪ್ರಾರಂಭವಾಗಲಿದೆ, ಮಕ್ಕಳು ಸಂತೋಷದಿಂದ ಇರುತ್ತೀರಿ.

ಕುಂಭ: ನೀವು ದಿನವಿಡೀ ಫ್ರೆಶ್ ಆಗಿರುತ್ತೀರಿ, ನಿಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಕೌಟುಂಬಿಕ ಕಲಹ ಕೊನೆಗೊಳ್ಳಲಿದೆ. ಶುಕ್ರವಾರ ನಿಮಗೆ ಬಹಳ ಒಳ್ಳೆಯ ದಿನವಾಗಿ ಸಾಬೀತಾಗಿ ಪರಿಣಮಿಸಲಿದೆ. ಮಾಡುವ ಕೆಲಸದಲ್ಲಿ ದೈವಿಕ ಸಹಾಯವನ್ನು ಪಡೆಯುತ್ತೀರಿ. ಕಠಿಣ ಪರಿಶ್ರಮ ಮತ್ತು ದಣಿವರಿಯದ ಪ್ರಯತ್ನದ ಫಲ ಖಂಡಿತವಾಗಿಯೂ ಸಿಗಲಿದೆ.

ಮೀನ: ನಿಮ್ಮ ಕೌಟುಂಬಿಕ ಜೀವನ ಏರಿಳಿತಗಳಿಂದ ಕೂಡಿರುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ನಿಮ್ಮ ಸ್ನೇಹಿತರು ಮತ್ತು ಪರಿಚಯಸ್ಥರೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ.

Edited By : Nagaraj Tulugeri
PublicNext

PublicNext

03/12/2021 08:52 am

Cinque Terre

39.81 K

Cinque Terre

0