ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 24.9.2021

ಮೇಷ: ಸಗಟು ವಹಿವಾಟು ಮಾಡುವವರಿಗೆ ಪ್ರಗತಿ ಇದೆ. ಅನವಶ್ಯಕ ಅಪವಾದಗಳು ಬರಬಹುದು. ಆರೋಗ್ಯದಲ್ಲಿ ಏರುಪೇರು.

ವೃಷಭ: ಕಚೇರಿಯ ಒತ್ತಡದಿಂದ ಪಾರಾಗುವಿರಿ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ. ಕುಲದೇವರನ್ನು ಸ್ಮರಿಸಲು ಮರೆಯಬೇಡಿ.

ಮಿಥುನ: ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ. ಸಾಂಸಾರಿಕ ಜೀವನ ಉತ್ತಮಗೊಳ್ಳಲಿದೆ. ತಂದೆಯ ಆರೋಗ್ಯದ ಬಗ್ಗೆ ನಿಗಾ ಇರಲಿ.

ಕಟಕ: ದಿಢೀರನೆ ಸಮಸ್ಯೆಗಳು ಬರಬಹುದು. ಆದರೆ ಕುಟುಂಬದವರ ಸಹಕಾರದಿಂದ ಪರಿಹಾರ ಆಗುತ್ತದೆ. ಆರೋಗ್ಯ ಸಮಸ್ಯೆ.

ಸಿಂಹ: ಗುರು ಹಿರಿಯರ ಮಾತನ್ನು ಆಲಿಸುವ ವ್ಯವಧಾನವನ್ನು ಇಟ್ಟುಕೊಳ್ಳಿ. ಹಿತಶತ್ರುಗಳು ನಿಮ್ಮ ಹೆಸರನ್ನು ಕೆಡಿಸಬಹುದು. ಎಚ್ಚರ.

ಕನ್ಯಾ: ದೃಢ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಗೊಂದಲ. ಧಾರ್ವಿುಕ ಕಾರ್ಯಗಳಲ್ಲಿ ಭಾಗವಹಿಸಿ. ಮೇಲಧಿಕಾರಿಗಳಿಂದ ಛೀಮಾರಿ.

ತುಲಾ: ಕಚೇರಿಯಲ್ಲಿ ಹೆಚ್ಚಿನ ಜವಾಬ್ದಾರಿ. ಬಹುಕಾಲದಿಂದ ನನೆಗುದಿಯಲ್ಲಿದ್ದ ಆಸ್ತಿ ವಿಚಾರಕ್ಕೆ ರ್ತಾಕ ಅಂತ್ಯ. ಸಂಜೆ ಸಿಹಿಸುದ್ದಿ.

ವೃಶ್ಚಿಕ: ಆಸ್ತಿ ವಿವಾದದಲ್ಲಿ ಮಧ್ಯಸ್ಥಿಕೆಯಿಂದ ಲಾಭ. ಆತ್ಮಾಭಿಮಾನಕ್ಕೆ ಧಕ್ಕೆ ತರುವ ಘಟನೆ. ಹಳೆಯ ಸ್ನೇಹಿತನ ಭೇಟಿ.

ಧನುಸ್ಸು: ನಿಮ್ಮ ಶ್ರಮಕ್ಕೆ ತಕ್ಕ ಫಲವಿದೆ. ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ಅನವಶ್ಯಕ ಖರ್ಚು ನಿಯಂತ್ರಿಸುವುದು ಅನಿವಾರ್ಯ.

ಮಕರ: ನೆರೆಯವರೊಂದಿಗೆ ಭಿನ್ನಾಭಿಪ್ರಾಯ. ಆಹಾರ ಸೇವನೆಯಿಂದ ವ್ಯತ್ಯಾಸದಿಂದ ಆರೋಗ್ಯ ಸಮಸ್ಯೆ. ಕಚೇರಿಯಲ್ಲಿ ಒತ್ತಡ.

ಕುಂಭ: ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಸಹೋದರಿಯರಿಂದ ಸಹಾಯ ಸಿಗಲಿದೆ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.

ಮೀನ: ವಿದ್ಯಾರ್ಥಿಗಳಿಗೆ ಸೋಲು. ಮಧ್ಯಸ್ಥಿಕೆ ವ್ಯವಹಾರದಲ್ಲಿ ಲಾಭ. ಆತ್ಮೀಯರ ವಿಯೋಗ. ದಿನಾಂತ್ಯದಲ್ಲಿ ಆಯಾಸ.

Edited By : Nirmala Aralikatti
PublicNext

PublicNext

24/09/2021 07:15 am

Cinque Terre

22.73 K

Cinque Terre

0