ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ 08.1.2021

ಮೇಷ: ಒಮ್ಮೆಲೇ ಅನೇಕ ದಾರಿಗಳು ಎದುರಾಗುತ್ತವೆ. ಆದರೂ ಕೂಡ ರ್ತಾಕತೆಯಿಂದ ಸೂಕ್ತವಾದ ದಾರಿಯನ್ನು ಆರಿಸಿಕೊಳ್ಳಿ.

ವೃಷಭ: ನೀವು ಸರಿಯಾಗಿಯೇ ವ್ಯವಹಾರ ಮಾಡಲು ಹೊರಡುತ್ತೀರಿ. ಕೆಲವು ಕಿಡಿಗೇಡಿಗಳಿಂದ ತೊಂದರೆ ಎದುರಾಗಬಹುದು.

ಮಿಥುನ: ಹೊರನೋಟಕ್ಕೆ ಎಲ್ಲವೂ ಸರಿಯಾಗಿ ಇದ್ದಂತೆ ಕಾಣಿಸಬಹುದು. ಆದರೆ ಥಟ್ಟನೆ ಕೆಲವು ಬಗೆಯ ಕಿರಿಕಿರಿಗಳು ಎದುರಾಗಬಹುದು.

ಕಟಕ: ಧನಲಾಭದ ಮಾರ್ಗಗಳನ್ನು ಸಮಂಜಸವಾಗಿ ತಿಳಿದುಕೊಂಡು ಮುಂದೆ ಹೆಜ್ಜೆ ಇಡುವುದಕ್ಕೆ ವರ್ತಮಾನ ಸಹಕಾರ ನೀಡಲಿದೆ.

ಸಿಂಹ: ಹತ್ತಿರದವರಿಂದ ಕೆಲವು ರೀತಿಯ ನೋವುಗಳನ್ನು ಎದುರಿಸಲು ಸಿದ್ಧರಾಗಿ. ಹಳೆಯ ಅನುಭವವೇ ಸಂಜೀವಿನಿಯಾಗಿ ರಕ್ಷಿಸಲಿದೆ.

ಕನ್ಯಾ: ಪರಿಶ್ರಮವೇ ಇರದೆ ಒಳದಾರಿಗಳಲ್ಲಿಯೇ ಕೆಲಸವನ್ನು ಮುಗಿಸಲು ಸಾಧ್ಯ ಎಂಬಂತಹ ನಂಬಿಕೆಯು ಕೈಕೊಡಬಹುದು.

ತುಲಾ: ಮೃದು ಸ್ವಭಾವದವರಾದ ನಿಮ್ಮನ್ನು ಕೆಲವರು ತೊಂದರೆಗೆ ಸಿಲುಕಿಸಬಹುದು. ಜಾಣ್ಮೆಯಿಂದ ಅದನ್ನು ತಪ್ಪಿಸಿಕೊಂಡರೆ ಯುಕ್ತ.

ವೃಶ್ಚಿಕ: ವೃತ್ತಿಪರತೆಯನ್ನು ಪ್ರದರ್ಶಿಸಿದರೆ ವಿವಿಧ ದಿಕ್ಕುಗಳಲ್ಲಿ ಹಲವಾರು ರೀತಿಯ ಅವಕಾಶಗಳು ಅರಳಬಹುದಾಗಿದೆ.

ಧನುಸ್ಸು: ಕೃಷಿಯ ವಿಚಾರದಲ್ಲಿ ಹಿಂದಿನ ಕೆಲವು ತಪ್ಪುಗಳು ಮತ್ತೆ ಮತ್ತೆ ಘಟಿಸದಂತೆ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸಿದರೆ ಲಾಭವುಂಟಾಗಲಿದೆ.

ಮಕರ: ವ್ಯಾಜ್ಯದ ವಿಚಾರದಲ್ಲಿ ನಿಮ್ಮ ಕೆಲವು ಹತ್ತಿರದ ಬಂಧುಗಳೇ ನೈತಿಕವಾದ ಬೆಂಬಲ ನೀಡಲಿದ್ದಾರೆ. ಶಿವನನ್ನು ಭಕ್ತಿಯಿಂದ ಧ್ಯಾನಿಸಿ.

ಕುಂಭ: ಹೊಸದಾದ ಕೆಲಸದ ಬಗೆಗೆ ವಿಶೇಷ ನಿರೀಕ್ಷೆ ಹೊಂದಿದ್ದೀರಿ. ಅದಕ್ಕೆ ಉತ್ತಮವಾದ ಅವಕಾಶ ಎದುರಾಗುವ ಸಾಧ್ಯತೆಗಳಿವೆ.

ಮೀನ: ಹಿರಿಯರು ನೆರವು ನೀಡುತ್ತಾರೆ. ಅವರೊಡನೆ ನಿಮ್ಮ ಕಷ್ಟಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಹಿಂಜರಿಯದಿರಿ. ಒಳಿತಾಗಲಿದೆ.

Edited By : Nirmala Aralikatti
PublicNext

PublicNext

08/01/2021 07:20 am

Cinque Terre

38.66 K

Cinque Terre

0