ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 24 ಡಿಸೆಂಬರ್ 2020

ಮೇಷ ರಾಶಿ

ಕೆಲಸದಲ್ಲಿ ನಿಮಗೆ ಉತ್ತಮ ಲಾಭ ಇರಲಿದೆ. ಕುಟುಂಬ ವ್ಯವಹಾರದಲ್ಲಿ ಲಾಭಾಂಶ. ಪತ್ನಿ ದಿಂದ ನೆಮ್ಮದಿ ಪ್ರಾಪ್ತಿ. ಭೂವ್ಯವಹಾರ ಕಾರ್ಯ ತೊಡಗಿಸಿಕೊಂಡಿದ್ದರೆ ಆರ್ಥಿಕದಲ್ಲಿ ಚೇತರಿಕೆ. ನೂತನವಾಗಿ ಪ್ರಾರಂಭಿಸಿರುವ ವ್ಯಾಪಾರ ಉತ್ತಮ ಲಾಭಗಳನ್ನು ಪಡೆಯಬಹುದು. ಉದ್ಯೋಗಿಗಳಿಗೆ ಹಣಕಾಸು ವ್ಯವಹಾರ ಸಾಮಾನ್ಯವಾಗಿರಲಿದೆ. ಬಾಕಿ ಇರುವ ಕಾರ್ಯಗಳಿಗೆ ಮತ್ತೆ ಅಡೆತಡೆ ಸಂಭವ. ವೈಯಕ್ತಿಕ ಜೀವನದ ವಿಚಾರದಲ್ಲಿ ಮಧ್ಯಸ್ಥಿಕೆ ಜನರಿಂದ ತೊಂದರೆ ಸಾಧ್ಯವಿದೆ. ಪ್ರೇಮಿಗಳ ಜೀವನದಲ್ಲಿ ಶಾಂತಿ ಇರುತ್ತದೆ. ಪ್ರಣಯ ಜೀವನದಲ್ಲಿ ಮದುವೆ ಸಮಸ್ಯೆಗಳು ಇರುವುದರಿಂದ ತುಂಬಾ ಅಸಮಾಧಾನಗೊಳ್ಳುತ್ತೀರಿ. ಹಣದ ವಿಷಯದಲ್ಲಿ ಗೊಂದಲ. ಕೆಲಸದ ಬದಲಾವಣೆ ಸದ್ಯಕ್ಕೆ ಬೇಡ. ನೂತನ ವ್ಯಾಪಾರ ಪ್ರಾರಂಭ ಮಾಡುವಿರಿ. ಸಹೋದರಿಯರ ಬೇಡಿಕೆ ಪ್ರಸ್ತಾಪ ಬರಲಿದೆ. ಇಂದು ನಿಮಗೆ ಧನ ಸಹಾಯ ಕೇಳಲು ಬರುವರಿದ್ದಾರೆ. ರಾಜಕಾರಣಿಗಳಿಗೆ ಉನ್ನತ ಸ್ಥಾನ ಲಭಿಸುವುದು ಆದರೆ ಹಿತೈಷಿಗಳ ಬಗ್ಗೆ ಎಚ್ಚರವಿರಲಿ.

ವೃಷಭ ರಾಶಿ

ನೂತನವಾಗಿ ಪ್ರಾರಂಭಿಸಿರುವ ಉದ್ಯೋಗ ನಿಮ್ಮ ಆರ್ಥಿಕ ಪರಿಸ್ಥಿತಿ ಕುಸಿಯುವ ಸಾಧ್ಯತೆ ಇದೆ. ಕಿರಾಣಿ, ವಸ್ತ್ರ, ಎಣ್ಣೆ ಪದಾರ್ಥ, ವ್ಯಾಪಾರಿಗಳಿಗೆ ಏರಿಳಿತದಿಂದ ತುಂಬಿರುತ್ತದೆ. ಈ ಸಮಯದಲ್ಲಿ ಯಾವುದೇ ಹೊಸ ಉದ್ಯೋಗ ಬೇಡ. ಕುಟುಂಬದಲ್ಲಿ ಶುಭ ಮಂಗಳ ಕಾರ್ಯ ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದು. ಉದ್ಯೋಗ ಆರಂಭದಲ್ಲಿ ಅಷ್ಟೇನೂ ಪ್ರಗತಿ ಇರುವುದಿಲ್ಲ ಆದರೆ ಕ್ರಮೇಣ ಪರಿಸ್ಥಿತಿ ಸುಧಾರಿಸುತ್ತದೆ. ಕೆಲಸದ ಒತ್ತಡವು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಮೇಲಾಧಿಕಾರಿಯ ಕಿರುಕುಳ ಹಾಗೂ ಒತ್ತಡ ನಿಮ್ಮ ಮೇಲೆ ಪ್ರಭಾವ ಬೀರಲಿದೆ. ನಿರುದ್ಯೋಗಿಗಳು ಸವಾಲನ್ನು ಎದುರಿಸಬಹುದು. ನವದಂಪತಿಗಳ ಜೀವನವು ಸಾಮಾನ್ಯವಾಗಿರಲಿದೆ.

ಮಿಥುನ ರಾಶಿ

ಆರಂಭಿಕ ದಿನಗಳು ವ್ಯಾಪಾರ ವಹಿವಾಟಿನಲ್ಲಿ ಕಷ್ಟಕರವಾಗಿರುತ್ತದೆ, ಅದು ನಿಮ್ಮನ್ನು ಮಾನಸಿಕವಾಗಿ ಅಸಮಾಧಾನಗೊಳಿಸುತ್ತದೆ. ಕುಟುಂಬ ಸದಸ್ಯರೊಂದಿಗಿನ ನಿಮ್ಮ ಸಂಬಂಧ ಆಸ್ತಿ ಪಾಲುದಾರಿಕೆಗಾಗಿ ಹದಗೆಡಬಹುದು. ನಿಮ್ಮ ಸಂಗಾತಿ ಪ್ರೀತಿ ಮತ್ತು ಪರಸ್ಪರ ಸಂಬಂಧವನ್ನು ಹೆಚ್ಚಿಸಲು ಬಯಸುತ್ತೀರಿ. ರಾಜಕಾರಣಿಗಳಿಗೆ ತೊಂದರೆಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ. ಆದರೆ ನಿಮ್ಮ ತೀಕ್ಷಣ ಚಾಣಕ್ಷತನದಿಂದ ಅವುಗಳನ್ನು ನಿಭಾಯಿಸಿ. ನಿಮ್ಮ ಪತ್ನಿಯೊಂದಿಗೆ ಹೆಚ್ಚು ಸಮಯ ಕಳೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆ ದಿಂದ ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ. ಮೇಲಾಧಿಕಾರಿ ನಿಮ್ಮ ಬಗ್ಗೆ ಪ್ರಶಂಸಿಸಲಾಗುತ್ತದೆ. ನಿಮ್ಮ ಕಚೇರಿ ಕೆಲಸವನ್ನು ಪೂರ್ಣಗೊಳಿಸುತ್ತೀರಿ.ನಿಮ್ಮ ಆರೋಗ್ಯ ಉತ್ತಮವಾಗಿರುವುದಿಲ್ಲ. ತಲೆನೋವು, ಎದೆ ನೋವು, ಕಣ್ಣಿನ ಕಿರಿಕಿರಿ, ಬೆನ್ನು ನೋವು ನೀವು ಅನುಭವಿಸುವಿರಿ. ಸ್ನೇಹಿತರ ಮೂಲಕ ಉದ್ಯೋಗ ಸಿಗುವ ಪ್ರಾಪ್ತಿ. ಸಂತಾನದ ಸುದ್ದಿ ಕೇಳುವಿರಿ. ಮನೆಯಲ್ಲಿ ಶುಭಮಂಗಲ ಕಾರ್ಯಗಳು ಜರುಗುವುದು.

ಕರ್ಕ ರಾಶಿ

ಸಂಗಾತಿಯೊಂದಿಗಿನ ಸಂಬಂಧದಲ್ಲಿ ಕಹಿ. ಪ್ರೇಮ ಪ್ರಣಯ ಜೀವನವು ಸಾಮಾನ್ಯವಾಗಬಹುದು. ಪ್ರಣಯ ಜೀವನದ ಮದುವೆ ವಿಳಂಬ ಸಾಧ್ಯತೆ. ಶತ್ರುಗಳಿಂದ ಕೆಲವು ಸಮಸ್ಯೆಗಳನ್ನು ಎದುರಿಸುವಿರಿ. ನಿಮ್ಮ ಕೋಪವನ್ನು ನಿಯಂತ್ರಣವಿರಲಿ. ವಿಚ್ಛೇದನ ಪಡೆದ ಮಕ್ಕಳ ಮರು ಮದುವೆ ಸೂಚಿಸಲಾಗುವುದು. ಹಣಕಾಸಿನ ವಿಷಯಗಳು ಸದೃಢವಾಗಿರುತ್ತವೆ ಮತ್ತು ಜೀವ ವಿಮೆಗೆ ಸಂಬಂಧಿಸಿದ ಹಣ ಹೂಡಿಕೆ ಮಾಡುವಿರಿ. ಉದ್ಯೋಗ ವ್ಯವಹಾರ ವಿಸ್ತರಿಸಲು ನೀವು ಪತ್ನಿಯ ಸಹಾಯ ಪಡೆಯುವಿರಿ. ಈ ಸಮಯವು ವ್ಯಾಪಾರಿಗಳಿಗೆ ಆರ್ಥಿಕ ಸ್ಥಿತಿ ಅನುಕೂಲಕರವಾಗಿರುತ್ತದೆ. ಉದ್ಯೋಗಿಗಳಿಗೆ ಹೆಚ್ಚಿನ ಕೆಲಸದ ಹೊರೆ ಸಾಧ್ಯತೆ . ಸರಕಾರಿ ಉದ್ಯೋಗಿಗಳು ಹೆಚ್ಚು ಒತ್ತಡವನ್ನು ಪಡೆಯಬಹುದು. ಮಾತಾಪಿತೃ ಮತ್ತು ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ. ವಾಹನ ಸವಾರಿ ಅಜಾಗರೂಕತೆಯನ್ನು ತಪ್ಪಿಸಿದರೆ ದೊಡ್ಡ ಸಮಸ್ಯೆ ದಿಂದ ಪಾರಾಗಲಿದೆ. ಇಂದು ನೀವು ತುಂಬಾ ಅದೃಷ್ಟವಂತರು. ಮದುವೆ ಸಮಾಚಾರ ಕೇಳುವಿರಿ. ಮನೆ ಕಟ್ಟಡದ ಚಿಂತನೆ ಮಾಡುವಿರಿ.

ಸಿಂಹ ರಾಶಿ

ಜೀವನದ ಪ್ರತಿಯೊಂದು ಕ್ಷಣ ಹೊಸ ಪರಿವರ್ತನೆಯಾಗಲಿದೆ. ಬಾಕಿ ಸಾಲದ ಮೊತ್ತ ಕಡಿಮೆ ಮಾಡಲು ಬಯಸುತ್ತೀರಿ. ನೀವು ಪೂರ್ಣ ಉತ್ಸಾಹ ಮತ್ತು ಏಕಾಗ್ರತೆಯಿಂದ ಕೆಲಸ ಮಾಡುತ್ತೀರಿ. ನಿಮ್ಮ ಹಣಕಾಸಿನ ಪ್ರಗತಿಗೆ ದಾರಿ ಮಾಡಿಕೊಡುತ್ತದೆ. ಸೃಜನಶೀಲ ರಾಜಕಾರಣಿಗೆ ಕ್ಷೇತ್ರಗಳ ಸಂಬಂಧಿಸಿದ ಜನರು ಉತ್ತಮ ಪ್ರಯೋಜನಗಳನ್ನು ನೀವು ನೀಡುವಿರಿ. ಅತಿಯಾದ ಕೋಪ ಒಳಿತಲ್ಲ. ಸಂಗಾತಿ ಜೊತೆ ವರ್ತಿಸುವ ನಡತೆ ಶೋಭಿತಲ್ಲ. ಉದ್ಯೋಗದ ಬದಲಾವಣೆ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಸೂಚಿಸಲಾಗಿದೆ. ಮನೆಯ ವಾತಾವರಣವು ಶಾಂತವಾಗಿರುತ್ತದೆ ಮತ್ತು ಹೆತ್ತವರೊಂದಿಗೆ ಉತ್ತಮ ಸಮಯವನ್ನು ಹೊಂದಿರುತ್ತೀರಿ, ಆಸ್ತಿ ಪಾಲುದಾರಿಕೆ ಪ್ರಸ್ತಾಪ ಮಾಡಬಹುದು. ಅವಿವಾಹಿತರಾಗಿದ್ದರೆ ಕುಟುಂಬದ ಹಿರಿಯರ ಕಡೆಯಿಂದ ಮದುವೆಗಾಗಿ ಪ್ರಸ್ತಾಪ ಬರುತ್ತದೆ. ಇಡೀ ಕುಟುಂಬದ ಜವಾಬ್ದಾರಿ ನಿಮ್ಮ ಮೇಲೆ ಒತ್ತಡ ಹೇರಬಹುದು. ನಿಮ್ಮ ಪ್ರೇಯಸಿ ಜೊತೆಗಿನ ಮದುವೆ ಅಭಿಪ್ರಾಯವನ್ನು ಬಹಿರಂಗವಾಗಿ ತಿಳಿಸಿ. ಆರ್ಥಿಕ ಪರಿಸ್ಥಿತಿ ನಿಧಾನವಾಗಿರುತ್ತದೆ. ಆರೋಗ್ಯದ ವಿಷಯದಲ್ಲಿ ಕಾಳಜಿ ವಹಿಸಬೇಕು. ವಾಹನ ಸವಾರಿ ಮಾಡುವಾಗ ಜಾಗೃತಿವಹಿಸಿ. ಪಾಲುದಾರಿಕೆ ವ್ಯವಹಾರ ಚರ್ಚೆ ಬೇಡ.

ಕನ್ಯಾ ರಾಶಿ

ನೀವು ಮತ್ತು ಪತ್ನಿ ಜೊತೆಗೂಡಿ ಪ್ರಮುಖ ಕಾರ್ಯವನ್ನು ಪೂರ್ಣಗೊಳಿಸುವಲ್ಲಿ ತುಂಬಾ ಕಾರ್ಯನಿರತರಾಗಿರುತ್ತೀರಿ. ಕೆಲಸದಲ್ಲಿ ಯಶಸ್ಸನ್ನು ಪಡೆಯುವಿರಿ. ನಿಮ್ಮ ಜೀವನದಲ್ಲಿ ಸಂತೋಷ ಇರುತ್ತದೆ. ಯುವ ರಾಜಕಾರಣಿಗಳು ಖ್ಯಾತಿಯನ್ನು ಪಡೆಯುವಿರಿ. ಹಣಕಾಸಿನ ದೀರ್ಘಕಾಲದ ಸಮಸ್ಯೆ ಬಗೆಹರಿಸಿಕೊಳ್ಳವುದರಿಂದ ಆರ್ಥಿಕವಾಗಿ ಬಲಶಾಲಿಯಾಗುತ್ತೀರಿ. ವಿವಾಹಿತರಿಗೆ ಸಂತಾನ ನಿರೀಕ್ಷಣೆಗಾಗಿ ಒಳ್ಳೆಯ ದಿನವಾಗಲಿದೆ. ನಿಮ್ಮಿಬ್ಬರ ನಡುವೆ ಮಾಧುರ್ಯ ಇರುತ್ತದೆ. ಪ್ರಣಯ ಜೀವನದಲ್ಲಿ ಸರಸ ಸಲ್ಲಾಪ ಹೆಚ್ಚಾಗಲಿದೆ. ಸಂಗಾತಿಯ ಬಗ್ಗೆ ನಿಮಗೆ ಅನುಮಾನ. ಅದು ನಿಮ್ಮ ಮದುವೆ ಸಮಸ್ಯೆ ಉಂಟುಮಾಡುತ್ತದೆ. ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ ಕಾಡಲಿದೆ. ಸಾಲ ವಸೂಲಾತಿ ದಿಂದ ಮನಸ್ತಾಪ ಹೆಚ್ಚಾಗಲಿದೆ. ದೂರದ ಪ್ರಯಾಣ ಮಾಡುವ ಅಗತ್ಯವಿಲ್ಲ. ನೀವು ಕೆಲವು ಹಳೆಯ ಸ್ನೇಹಿತರನ್ನು ಭೇಟಿಮಾಡಲಿದ್ದೀರಿ.

ತುಲಾ ರಾಶಿ

ವೃತ್ತಿಗೆ ಸಂಬಂಧಿಸಿದ ಕೆಲವು ನಿರ್ಧಾರಗಳು ತೆಗೆದುಕೊಳ್ಳುವಿರಿ. ವೃತ್ತಿರಂಗ ಬದಲಾಯಿಸುವುದು ಬೇಡ. ನಿಮ್ಮ ಸಾಮರ್ಥ್ಯ ಗಮನದಲ್ಲಿಟ್ಟು ಸಾಲ ಪಡೆಯಿರಿ. ಹೊಸ ಉದ್ಯಮ ಆಯ್ಕೆ ಮಾಡುವಿರಿ. ವ್ಯಾಪಾರಿಗಳು ಜಾಗರೂಕರಾಗಿ ಹಣ ಉಳಿತಾಯ ಮಾಡುವಿರಿ. ಹೂಡಿಕೆ ಮಾಡಿರುವ ಹಣ ಮರಳಿ ಪಡೆಯುವ ಸಾಧ್ಯತೆ. ಭೂ ಸಂಬಂಧಿಸಿದ ಕಾರ್ಯಗಳಿಗೆ ಹಣ ಹೂಡಿಕೆ ಮಾಡುವಿರಿ. ಪತ್ನಿಯ ಮಾರ್ಗದರ್ಶನ ಪಡೆಯಿರಿ. ಯಾವುದೇ ತಪ್ಪು ನಿರ್ಧಾರವನ್ನು ಮಾಡಬೇಡಿ. ಶಿಕ್ಷಕವೃಂದದವರಿಗೆ ವರ್ಗಾವಣೆ ನಷ್ಟದ ಸಾಧ್ಯತೆಯೂ ಇದೆ. ಉದ್ಯೋಗಿಗಳಿಗೆ ಉತ್ತಮ ಲಾಭಾಂಶವಾಗಿರುತ್ತದೆ. ನಿಮ್ಮ ಕೆಲಸವನ್ನು “ಕಾಯಕವೇ ಕೈಲಾಸ” ಎಂದು ತಿಳಿದು ಶ್ರದ್ಧೆಯಿಂದ ಮಾಡುತ್ತೀರಿ. ಮುಂದಿನ ದಿನಗಳು ನಿಮಗೆ ತುಂಬಾ ಲಾಭ ಬರಲಿದೆ. ಸರಕಾರಿ ನೌಕರಿ ಪಡೆಯಲು ನಿರಂತರ ಪ್ರಯತ್ನ ಮಾಡುವಿರಿ. ನೀವು ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ಮಾಡುವಿರಿ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರುತ್ತದೆ. ಮಾತಾಪಿತೃ ಆರೋಗ್ಯದ ಪರಿಸ್ಥಿತಿ ಚೆನ್ನಾಗಿರುವುದಿಲ್ಲ. ಆದಾಯಕ್ಕಿಂತ ಹೆಚ್ಚು ವೆಚ್ಚವಾಗಬಹುದು. ಆದಾಯ ಪತ್ನಿಗೆ ನೀಡಿ. ಮಕ್ಕಳ ನಡವಳಿಕೆಯ ಬಗ್ಗೆ ಗಮನವಿರಲಿ.

ವೃಶ್ಚಿಕ ರಾಶಿ

ಕಂಪ್ಯೂಟರ್‌ಗೆ ಸಂಬಂಧಿಸಿದ ಶಿಕ್ಷಣ ಉದ್ಯಮ ಪ್ರಾರಂಭ ಮಾಡಿದರೆ ಒಳಿತು.ನೀವು ನಿಮ್ಮ ಸಂಗಾತಿಯ ಬಗ್ಗೆ ಹೆಚ್ಚು ಗಮನ ಹರಿಸುತ್ತೀರಿ. ಮಾನಸಿಕವಾಗಿ ಮತ್ತು ದೈಹಿಕವಾಗಿ ಪ್ರಗತಿ. ದೀರ್ಘಕಾಲೀನ ಮದುವೆ ಸಮಸ್ಯೆಯನ್ನು ಪರಿಹರಿಸಲಾಗುವುದು. ಸಾಲ ತೀರಿಸಿ ನಿಮ್ಮ ಮಾನಸಿಕ ಒತ್ತಡ ಕಡಿಮೆ ಆಗಲಿದೆ. ಮಗಳ ಕುಟುಂಬ ಜೀವನವು ಕಷ್ಟಕರವಾಗಿದೆ. ಬಾಳಸಂಗಾತಿ ದೊಂದಿಗೆ ಬಹಳ ಮೋಜಿನ ಸಮಯವನ್ನು ಕಳೆಯುತ್ತೀರಿ. ಸಂಗಾತಿಯೊಂದಿಗಿನ ಪ್ರಣಯ ಸಾಮರಸ್ಯ ಇರುತ್ತದೆ. ಇಬ್ಬರೂ ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದು. ಉದ್ಯಮದಾರರು ಮತ್ತು ವ್ಯಾಪಾರಸ್ಥರು ಆರ್ಥಿಕ ಪರಿಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ದೀರ್ಘಕಾಲ ಪ್ರಯಾಣದಿಂದ ತೊಂದರೆ. ವಿದೇಶ ಪ್ರವಾಸ ಅತಂತ್ರ.

ಧನಸ್ಸು ರಾಶಿ

ದಂಪತಿಗಳಿಗೆ ಸಂತಾನಭಾಗ್ಯದ ಸೂಚನೆ ಕಂಡು ಬರಲಿದೆ. ಯೋಗ್ಯ ಜನರ ಸಹವಾಸದ ಸದುಪಯೋಗದಿಂದ ಕಾರ್ಯಾನುಕೂಲಕ್ಕೆ ಸಾಧ್ಯತೆ ಇದೆ. ಆರ್ಥಿಕವಾಗಿ ಧನಾಗಮನ ಉತ್ತಮವಾಗಿರುತ್ತದೆ. ಅವಿವಾಹಿತರ ಕನಸು ನನಸಾಗಲಿದೆ. ಕೆಲಸದ ಸ್ಥಳದಲ್ಲಿ ಇಂದು ನಿಮ್ಮ ಹೆಗಲ ಮೇಲೆ ಕೆಲವು ಹೆಚ್ಚುವರಿ ಕೆಲಸದ ಹೊರೆ ಬೀಳಬಹುದು.ನೀವು ಉದ್ಯೋಗದಲ್ಲಿದ್ದರೆ, ನಿಮಗೆ ಹೊಸ ಕೆಲಸವನ್ನು ನಿಯೋಜಿಸಬಹುದು. ಮಕ್ಕಳ ನಡತೆಯ ಬಗ್ಗೆ ಗಮನವಿರಲಿ. ಹೊಸ ಕಾರ್ಯಗಳನ್ನು ಕಲಿಯುವಲ್ಲಿ ಯಶಸ್ವಿಯಾಗುವಿರಿ. ಯಾರಾದರೂ ನಿಮ್ಮ ಮೇಲೆ ಆರೋಪ ಮಾಡಿದ್ದರೆ, ಇಂದು ನೀವು ಸಹ ನಿಮ್ಮದೇ ಸರಿ ಎಂದು ಸಾಬೀತುಪಡಿಸಲು ಸಾಧ್ಯವಾಗುತ್ತದೆ.

ಮಕರ ರಾಶಿ

ಮನೆಬದಲಾವಣೆ ಮಾಡಿಕೊಳ್ಳುವಿರಿ. ಉದ್ದಿಮೆದಾರರಿಗೆ ಹಾಗೂ ನೂತನ ವ್ಯಾಪಾರಸ್ಥರಿಗೆ ಆರಂಭದಲ್ಲಿ ನಿಮಗೆ ಸ್ವಲ್ಪ ತೊಂದರೆ ಇರುತ್ತದೆ. ನಿಧಾನವಾಗಿ ಪ್ರಗತಿ ಕಾಣುವಿರಿ. ಹೊಸ ಮನೆ ಚಿಂತನೆಕಾರ್ಯರೂಪಕ್ಕೆ ಬರುವುದು. ಆಸ್ತಿ ಪಾಲುದಾರಿಕೆ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳುವುದರಲ್ಲಿ ನೀವು ನಂಬಿದ್ದೀರಿ,ಆದರೆ ನಿಮ್ಮ ಮುಂದೆ ಒಂದು ಪರಿಸ್ಥಿತಿ ಉದ್ಭವಿಸಬಹುದು. ರಾಜಕಾರಣಿಗಳಿಗೆ ಮತಕ್ಷೇತ್ರದಲ್ಲಿ ಬೇಡಿಕೆ ಹೆಚ್ಚಾಗಲಿದೆ ,ಅಲ್ಲಿ ನೀವು ತಕ್ಷಣ ನಿರ್ಧಾರ ತೆಗೆದುಕೊಳ್ಳಬೇಕು. ನೀವು ಗೊಂದಲದ ಸ್ಥಿತಿಯಲ್ಲಿದ್ದರೆ ಆಪ್ತರ ಸಲಹೆ ಪಡೆಯಿರಿ. ಪ್ರೇಯಸಿ ಜೊತೆಗೆ ಮದುವೆ ಮಾಡಿಕೊಳ್ಳಲು ಹಿಂಜರಿಯಬೇಡಿ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಸಮಸ್ಯೆ ಉದ್ಭವ ಸಾಧ್ಯತೆ. ನಿಮ್ಮ ನಡವಳಿಕೆ ಬಗ್ಗೆ ನಿಂದನೆ ಮಾಡುವರು. ಫೈಲ್ ಗಳು ಸರಿಯಾಗಿ ಇಟ್ಟುಕೊಳ್ಳಿ.

ಕುಂಭ ರಾಶಿ

ವೃತ್ತಿರಂಗದಲ್ಲಿ ನೀವು ತುಂಬಾ ಶಾಂತ ಮತ್ತು ಸಮತೋಲನದಲ್ಲಿರಬೇಕು. ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಲಿದೆ ಮನೆಗೆ ತಡವಾಗಿ ಬರುವಿರಿ. ಸಹೋದ್ಯೋಗಿಗಳ ಸಹಾಯ ಕೆಲಸ ಶೀಘ್ರದಲ್ಲೇ ಪೂರ್ಣಗೊಳ್ಳುತ್ತದೆ. ಉನ್ನತ ಅಧಿಕಾರಿಯ ಮುಂದೆ ನಿಮ್ಮ ಬಗ್ಗೆ ಉತ್ತಮ ಸಂಬಂಧ ಬೆಳೆಯುವುದು. ಇದು ಭವಿಷ್ಯದ ಪ್ರಮೋಷನ್ಗೆ ಬಹಳ ಪ್ರಯೋಜನಕಾರಿಯಾಗಿದೆ. ಖಾಸಗಿ ವೃತ್ತಿರಂಗದಲ್ಲಿ, ಬಹಳಷ್ಟು ತೊಂದರೆಗಳು ಉಂಟಾಗಬಹುದು. ನಿಮ್ಮ ಜೀವನವನ್ನು ಬದಲಾಯಿಸುವಂತಹ ನಿರ್ಧಾರ ತೆಗೆದುಕೊಳ್ಳುವಿರಿ, ಹಿರಿಯರ ಸಲಹೆ ಮುಖ್ಯ. ನೀವು ಸಂಗಾತಿ ಜೊತೆಗೆ ಮದುವೆ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು. ನೀವು ಕುಟುಂಬ ಸದಸ್ಯರಿಂದ ಹೆಚ್ಚಿನ ವಿರೋಧ ಸೃಷ್ಟಿ. ಪೋಷಕರು ನಿಮ್ಮ ಬಗ್ಗೆ ಅತೃಪ್ತರಾಗುತ್ತಾರೆ.

ಮೀನ ರಾಶಿ

ಆರ್ಥಿಕ ದೃಷ್ಟಿಯಿಂದ ನಿಮಗೆ ವಿಶೇಷವಾಗಿರುವುದಿಲ್ಲ. ಕಠಿಣ ಪರಿಶ್ರಮ ಲಾಭದ ನಿರೀಕ್ಷೆ . ನಿರೀಕ್ಷೆಯಂತೆ ಉದ್ಯೋಗ ಸಿಗುವುದಿಲ್ಲ. ಹಣಕಾಸಿನಲ್ಲಿ ತೀವ್ರ ಅಡಚಣೆ. ಆಸ್ತಿ ವಿಷಯಗಳಲ್ಲಿ ನೀವು ಸ್ವಲ್ಪ ಗಮನ ಹರಿಸಬೇಕು. ಕೆಲಸದ ಸ್ಥಳದಲ್ಲಿ ಯಶಸ್ಸನ್ನು ನಿರೀಕ್ಷಿಸಲಾಗುತ್ತಿದೆ, ಆಗಾಗಿ ಕೆಲಸದ ಬದಲಾವಣೆ ಸದ್ಯಕ್ಕೆ ಬೇಡ. ನೀವು ಕಂಪನಿ ಬಾಸಾಗಿ ನಿಮ್ಮ ಕಠಿಣ ಪರಿಶ್ರಮದಿಂದ ಕಂಪನಿ ಪ್ರಗತಿ ಕಾಣಲಿದೆ, ನಿಮ್ಮನ್ನು ಪ್ರಶಂಸಿಸಲಾಗುತ್ತದೆ ಮತ್ತು ನೀವು ಯಶಸ್ಸನ್ನು ಪಡೆಯುತ್ತೀರಿ. ಮೇಲಾಧಿಕಾರಿ ಮತ್ತು ಸಹೋದ್ಯೋಗಿಗಳೊಂದಿಗಿನ ನಿಮ್ಮ ಸಂವಹನವೂ ಉತ್ತಮವಾಗಿರುತ್ತದೆ. ಕಂಪನಿಯು ನಿಮಗೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಸಂಗಾತಿಯೊಂದಿಗೆ ಸ್ವಲ್ಪ ಮೋಜಿನ ಸಮಯ ಕಳೆಯಿರಿ. ಸಂಗಾತಿಯ ಸಹಕಾರದ ಮೂಲಕ ನೀವು ಉಲ್ಲಾಸವನ್ನು ಅನುಭವಿಸುವಿರಿ. ಪ್ರೀತಿಯ ವಿಷಯದಲ್ಲಿ ನೀವು ಮದುವೆ ಫಲಿತಾಂಶ ಪಡೆಯಬಹುದು. ಪ್ರೀತಿಯ ಜೀವನಕ್ಕೆ ಸಂಬಂಧಿಸಿದಂತೆ ಬಹಳ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು.

Edited By : Nagaraj Tulugeri
PublicNext

PublicNext

24/12/2020 08:25 am

Cinque Terre

49 K

Cinque Terre

0