ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: ಮಂಗಳವಾರ, 22 ಅಕ್ಟೋಬರ್ 2024

ಮೇಷ

ಇಂದು ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ಗಳಿಕೆಗೆ ಉತ್ತಮ ಅವಕಾಶಗಳು ಲಭ್ಯವಾಗಲಿದ್ದು ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ. ಬಹುಕಾಲದ ನಿಮ್ಮ ಯೋಜನೆಗಳು ಇಂದು ಕಾರ್ಯರೂಪಕ್ಕೆ ಬರಲಿವೆ.

ವೃಷಭ

ನಿಮ್ಮ ವೈವಾಹಿಕ ಜೀವನದ ಸಂತೋಷದ ಕ್ಷಣಗಳನ್ನು ನೀವು ಆನಂದಿಸುವಿರಿ. ಹೊಸ ಕೆಲಸಗಳಲ್ಲಿ ಅಡೆತಡೆಗಳು ನಿವಾರಣೆಯಾಗಿ ಕೆಲಸಗಳು ಪೂರ್ಣಗೊಳ್ಳಲಿವೆ. ನಿಮ್ಮ ಶುದ್ಧವಾದ ಮನಸ್ಸೇ ನಿಮಗೆ ದಾರಿ ದೀಪ.

ಮಿಥುನ

ಸಮಾಜದಲ್ಲಿ ಇಂದು ನಿಮ್ಮ ಗೌರವ ಹೆಚ್ಚಾಗಲಿದೆ. ಮನಸ್ಸಿನಲ್ಲಿ ಪ್ರೀತಿ, ಸಹಕಾರದ ಭಾವನೆ ಇರುತ್ತದೆ. ಕುಟುಂಬ ಸದಸ್ಯರಿಂದ ಶುಭ ವಾರ್ತೆ ನಿರೀಕ್ಷಿಸಬಹುದು. ಹಣಕಾಸಿನ ಮೂಲಗಳು ಹೆಚ್ಚಾಗಲಿವೆ.

ಕರ್ಕಾಟಕ

ಇಂದು ಸ್ವಲ್ಪ ಜಾಗರೂಕರಾಗಿರಬೇಕು. ಹಠಾತ್ ಲಾಭ ಬರಬಹುದು, ಆದರೆ ದುಂದು ವೆಚ್ಚವನ್ನು ನಿಯಂತ್ರಿಸದಿದ್ದರೆ ಎಷ್ಟೇ ಹಣ ಬಂದರೂ ಕೈಯಲ್ಲಿ ನಿಲ್ಲುವುದಿಲ್ಲ. ಭವಿಷ್ಯದ ದೃಷ್ಟಿಯಿಂದ ಹೂಡಿಕೆಗೆ ಉತ್ತಮ ದಿನ.

ಸಿಂಹ

ಇಂದು ನೀವು ಕೆಲವು ಮನರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ಆದರೆ, ನಿಮ್ಮ ಸುತ್ತಲಿನ ಜನರ ಬಗ್ಗೆ ಜಾಗರೂಕರಾಗಿರಿ. ಮಕ್ಕಳ ಕಡೆಯಿಂದ ಶುಭ ಸುದ್ದಿ ಸ್ವೀಕರಿಸುವಿರಿ. ಕೆಲಸದಲ್ಲಿ ಸಮಸ್ಯೆಗಳು ನಿಮ್ಮ ಚಿಂತೆಗೆ ಕಾರಣವಾಗಬಹುದು.

ಕನ್ಯಾ

ಇಂದು ಅತ್ಯಂತ ಫಲಪ್ರದವಾದ ದಿನ. ನಿಮ್ಮ ಕುಟುಂಬದಲ್ಲಿ ಕೆಲವು ಶುಭ ಕಾರ್ಯಗಳು ಆಯೋಜಿಸಬಹುದು. ನಿಮ್ಮ ಪ್ರಗತಿಯ ಹಾದಿಯಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ. ಹಣಕಾಸಿನ ವಿಷಯಗಳು ಸುಧಾರಿಸಲಿವೆ.

ತುಲಾ

ಅದೃಷ್ಟದ ದೃಷ್ಟಿಯಿಂದ ಇದು ನಿಮಗೆ ಒಳ್ಳೆಯ ದಿನ. ನಿಮ್ಮ ಆದಾಯ ಹೆಚ್ಚಾದಂತೆ ಸಂತೋಷವೂ ಹೆಚ್ಚಾಗಲಿದೆ. ನಿಮ್ಮ ಪ್ರತಿ ಕೆಲಸದಲ್ಲಿ ಕುಟುಂಬಸ್ಥರ ಸಂಪೂರ್ಣ ಬೆಂಬಲ ದೊರೆಯಲಿದೆ. ಮಕ್ಕಳು ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣಗಳಿದ್ದಾರೆ.

ವೃಶ್ಚಿಕ

ಇಂದು ನಿಮಗೆ ಮಿಶ್ರ ಫಲಗಳಿಂದ ಕೂಡಿದ ದಿನ. ರಾಜಕೀಯ ಬದುಕಿನಲ್ಲಿರುವವರಿಗೆ ಅದೃಷ್ಟದ ಬೆಂಬಲ ದೊರೆಯಲಿದೆ. ನಿಮ್ಮ ಮಾತೇ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ. ಕೆಲವು ಪ್ರಮುಖ ಕೆಲಸಗಳಲ್ಲಿ ಚಿಂತನಶೀಲರಾಗಿ ವರ್ತಿಸಿ.

ಧನು

ಇಂದು ಮಿಶ್ರ ಫಲಿತಾಂಶಗಳಿಂದ ಕೂಡಿದ ದಿನ. ಕುಟುಂಬ ಸದಸ್ಯರಿಂದ ನಿಮ್ಮ ನಿರೀಕ್ಷೆಗೂ ಮೀರಿದ ಉಡುಗೊರೆ ದೊರೆಯಬಹುದು. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಗುಡ್ ನ್ಯೂಸ್ ಸಿಗಲಿದೆ. ಸರ್ಕಾರದ ಯೋಜನೆಗಳಲ್ಲಿ ಲಾಭ ಸಿಗಲಿದೆ.

ಮಕರ

ಇಂದು ನಿಮಗೆ ವಿಶೇಷವಾದ ದಿನ. ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಕೈಗೊಳ್ಳುವಾಗ ಖರ್ಚುಗಳನ್ನು ಸರಿಯಾಗಿ ನಿರ್ವಹಿಸಿ. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮಗೊಳ್ಳಲಿದೆ. ತಾಯಿಯೊಂದಿಗಿನ ಸಂಬಂಧ ಸುಧಾರಿಸಲಿದೆ.

ಕುಂಭ

ಬಹುಕಾಲದ ನಿಮ್ಮ ಕನಸುಗಳಿಗೆ ರೆಕ್ಕೆ ದೊರೆಯಲಿದೆ. ಕೆಲಸದಲ್ಲಿ ಒತ್ತಡದ ಹೊರತಾಗಿಯೂ ನೀವು ಯಶಸ್ವಿಯಾಗಿ ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸುವೀರ್. ಮಾತು ಮತ್ತು ನಾದವಳಿಕೆಯನ್ನು ನಿಯಂತ್ರಿಸಿದರೆ ಒಳಿತು.

ಮೀನ

ವಿವಾಹಿತರಿಗೆ ವೈವಾಹಿಕ ಜೀವನದಲ್ಲಿ ಮೂಡಿದ್ದ ಬಿರುಕುಗಳು ಸರಿಹೋಗಲಿವೆ. ಮಕ್ಕಳೊಂದಿಗೆ ಮೋಜಿನ ಸಮಯವನ್ನು ಆನಂದಿಸುವಿರಿ. ಮಕ್ಕಳು ನಿಮ್ಮ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳುವುದರಿಂದ ಮನಸ್ಸಿಗೆ ಸಂತೋಷ.

Edited By : Nagaraj Tulugeri
PublicNext

PublicNext

22/10/2024 08:39 am

Cinque Terre

11.11 K

Cinque Terre

0