ನರಗುಂದ: ಆಧುನಿಕತೆ ಬೆಳೆದಂತೆ ಕೃಷಿ ಕ್ಷೇತ್ರ ಹಲವಾರು ಬದಲಾವಣೆಗೆ ಕಾರಣ ಆಗ್ತಾ ಇದೆ. ಅದರಲ್ಲೂ ಕೃಷಿ ಕ್ಷೇತ್ರಕ್ಕೆ ಇತ್ತ ವ್ಯವಹಾರದ ಜೊತೆ ಮಣ್ಣಲ್ಲೇ ಅನ್ನ ಬೆಳೆಯುವ ಮಾರ್ಗಕ್ಕೆ ಅದೆಷ್ಟೋ ಉದ್ಯೋಗಸ್ಥರು ಸೈ ಎನ್ನುತ್ತಲಿದ್ದಾರೆ.
ಹೌದು... ಕೃಷಿ ಜೊತೆ ಜೊತೆಗೆ ಫೋಟೋಗ್ರಾಫರ್ ವೃತ್ತಿ ನಿರ್ವಹಣೆ ಮಾಡುತ್ತಾ ಬಿಡುವಿದ್ದಾಗ ಕೃಷಿಯನ್ನು ಪ್ರೀತಿಸುತ್ತಾ ಅದರಲ್ಲೇ ಕೈ ಕೆಸರಾಗುವಂತೆ ದುಡಿಯುತ್ತ ನರಗುಂದ ತಾಲೂಕಿನ ಯಾಸಾ ಹಡಗಲಿ ಗ್ರಾಮದ ರೈತ ಶರಣು ಪಕ್ಕೀರಪ್ಪ ಬಡಿಗೇರ್ ಹೊಸ ಯಶಸ್ಸನ್ನು ಕಂಡಿದ್ದಾರೆ.
ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ 75×75 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡ ಶರಣು, ತನ್ನ ಫೋಟೋಗ್ರಫಿ ವೃತ್ತಿ ಜೊತೆ ಭೂತಾಯಿ ಕೃಷಿ ಆರಾಧಿಸುತ್ತಾ ತಮ್ಮ 2 ಎಕರೆ ಜಮೀನಿನಲ್ಲಿ 4 ಲಕ್ಷ ಆದಾಯ ಗಳಿಸಿದ್ದಾರೆ.
ಮುಂಗಾರು ಗೋವಿನಜೋಳ, ಈರುಳ್ಳಿ, ಹೆಸರು, ಮೆಣಸಿನಕಾಯಿ ಬೆಳೆದ ಇವರು ತೋಟಗಾರಿಕೆ, ತರಕಾರಿ ಬೆಳೆ ಬೆಳೆಯುತ್ತಾ ಪಿಯುಸಿಗೆ ಶಿಕ್ಷಣ ಕೈ ಬಿಟ್ಟು ಸ್ವ ಗ್ರಾಮ ಹಡಗಲಿಯಲ್ಲಿ ವೃತ್ತಿಯಲ್ಲಿ ಕೃಷಿಕರಾಗಿ ಪ್ರವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿ ಸಂತಸದ ಜೀವನ ನಡೆಸುತ್ತಿದ್ದಾರೆ.
ಇದೇ ಮೊದಲು ಒಣ ಬೇಸಾಯದ ಕೃಷಿ ಕೈ ಬಿಟ್ಟು ನಡೆದ ಇವರನ್ನು ಪುನಃ ಕೃಷಿ ಎಡೆಗೆ ಆಕರ್ಷಣೆ ಮಾಡಿದ್ದೇ ದೇಶಪಾಂಡೆ ಫೌಂಡೇಶನ್ ಕೃಷಿಹೊಂಡ. ಕಡಿಮೆ ಶ್ರಮ, ತನ್ನಿಷ್ಟದ ಬೆಳೆ, ಸಮಯಕ್ಕೆ ತಕ್ಕಂತೆ ನೀರು ಪಡೆಯುವ ಕೃಷಿ ಬದುಕು ಇವರನ್ನು ಕೃಷಿಕರಾಗಿ ಪ್ರವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿ ಯಶಸ್ಸನ್ನು ತಂದುಕೊಟ್ಟಿದೆ.
PublicNext
29/08/2022 11:39 am