ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ: ಪದವೀಧರರ ಕೃಷಿ ಪ್ರೇಮ... ವಾರ್ಷಿಕ ದಶಲಕ್ಷ ಖುಷಿಯ ವರಮಾನ

ನರಗುಂದ: ಅವರು ಬಿಎ ಪದವೀಧರರು. ಪದವಿ ಕಲಿಕೆ ಸಮಯದಲ್ಲೇ ನೌಕರಿ ಅವರ ಬಾಗಿಲನ್ನು ತಟ್ಟಿದೆ. ಆದ್ರೇ, ಭೂತಾಯಿ ಮೇಲಿನ ವಾತ್ಸಲ್ಯ ಕೃಷಿ ಕುಟುಂಬದ ಧ್ಯೇಯ ಅವರನ್ನು ಮಣ್ಣನ್ನೇ ನಂಬಿ ಬದುಕುವಂತೆ ಮಾಡಿ ಇಂದಿನ ಕೃಷಿ ಸಂಚಿಕೆಯ ಸಾಧಕರನ್ನಾಗಿ ಪರಿಚಯಿಸಿದೆ.

ಮೂಲತಃ ರೈತಾಪಿ ಕುಟುಂಬದ ನರಗುಂದ ತಾಲೂಕಿನ ಯಾವಗಲ್ ಗ್ರಾಮದ ಕೇಶವ ರೆಡ್ಡಿ, ಗೋವಿಂದ ರೆಡ್ಡಿ ಕೊಣ್ಣೂರ ಅವರೇ ಪದವಿಯಾದ್ರೂ ಪವಿತ್ರವಾದ ಕೃಷಿಯಲ್ಲೇ ಖುಷಿ ಕಂಡವರು. ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ 75/75 ಕೃಷಿಹೊಂಡ ನಿರ್ಮಿಸಿಕೊಂಡು ವಾರ್ಷಿಕ 10 ಲಕ್ಷಕ್ಕೂ ಅಧಿಕ ಆದಾಯ ಪಡೆದವರು.

ಇದೇ ಮೊದಲ ಒಣ ಬೇಸಾಯ ಬೆನ್ನಟ್ಟಿದ ರೈತ, ಅನ್ನದಾತನ ಕುಲಕ್ಕೆ ಮಾದರಿ ಬೇಸಾಯದ ಮಾರ್ಗ ತೋರಿದ ಕೃಷಿಹೊಂಡ ಪ್ರಯೋಜನಕ್ಕೆ ಮನಸೋತ ಕೇಶವರೆಡ್ಡಿ ಕೃಷಿಹೊಂಡ ಆಶ್ರಿತವಾಗಿ ಹತ್ತಿ, ಗೋವಿನಜೋಳ, ಈರುಳ್ಳಿ, ತೋಟಗಾರಿಕೆ ಬೆಳೆ ಮೆಣಸಿನಕಾಯಿ ಜೊತೆ ಜೊತೆಗೆ ತರಕಾರಿ ಬೆಳೆದು ಒಣ ಬೇಸಾಯಕ್ಕಿಂತ ಅತ್ಯಧಿಕ ಲಾಭ ಗಳಿಸಿದ್ದಾರೆ.

ಬೈಟ್.1 ಕೇಶವ ರೆಡ್ಡಿ, ಗೋವಿಂದ ರೆಡ್ಡಿ ಕೊಣ್ಣೂರ, ಉತ್ಸಾಹಿ ರೈತರು

ತಮ್ಮ 35 ಎಕರೆ ಜಮೀನಿಗೆ ಪೂರಕವಾಗಲು ಮತ್ತೊಂದು ಕೃಷಿಹೊಂಡ ನಿರ್ಮಾಣ ಕಾರ್ಯಕ್ಕೆ ಇಚ್ಛಿಸಿದ ರೈತ ಕೇಶವ ರೆಡ್ಡಿ ವಾಣಿಜ್ಯ ಬೆಳೆ ಹತ್ತಿ- ಈರುಳ್ಳಿಯಲ್ಲೇ ಹೆಚ್ಚಿನ ಆದಾಯಕ್ಕೆ ಸೈ ಎಂದಿದ್ದಾರೆ.

ಒಟ್ಟಾರೆ ದೊಡ್ಡ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ಯೋಜನೆ ರೈತರ ಬದುಕನ್ನು ಸಂಭ್ರಮಿಸುವಂತೆ ಮಾಡಿದ್ದು, ಕೃಷಿಯಲ್ಲಿ ಜಲದ ಕ್ರಾಂತಿ ಮಾಡಿ ಆದಾಯದಲ್ಲಿ ಹೆಚ್ಚಿನ ಗಳಿಕೆಯ ದಾಖಲೆ ಮಾಡಿದೆ‌.

Edited By : Shivu K
PublicNext

PublicNext

12/08/2022 05:08 pm

Cinque Terre

124.85 K

Cinque Terre

0