ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ: ಕೃಷಿಯಲ್ಲಿ ಹೊಸ ಕನಸುಗಾರ ಸಂಜೀವ; ದುಡಿಮೆಯೇ ಈತನ ಜೀವ

ನರಗುಂದ: ಮನಸ್ಸಿದ್ದರೇ ಮಾರ್ಗ ಎನ್ನುವ ಮಾತಂತೆ ಇಲ್ಲೊಬ್ಬ ರೈತರ ಮನಸ್ಸಿಟ್ಟು ಮಾಡಿದ ಕೃಷಿ, ಆ ಕೃಷಿಗೆ ಪೂರಕವಾದ ಕೃಷಿಹೊಂಡ, ಬೇಸಾಯದ ಬದುಕಲ್ಲಿ ವ್ಯಾಪಕ ಬದಲಾವಣೆ ತಂದು ರೈತ ಸಂಜೀವ ರೆಡ್ಡಿ ಬಾಳನ್ನು ಬೆಳಗಿದೆ.

ತರಕಾರಿ, ತೋಟಗಾರಿಕೆ, ವಾಣಿಜ್ಯ ಹೀಗೆ ಯಾವುದೇ ಬೆಳೆಗೆ ಸಹಕಾರಿಯಾಗಬಲ್ಲ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ 75/75 ಸುತ್ತಳತೆಯ ಕೃಷಿಹೊಂಡವನ್ನು ನಿರ್ಮಿಸಿಕೊಂಡ ನರಗುಂದ ತಾಲೂಕಿನ ಹದಲಿ ಗ್ರಾಮದ ರೈತ ಸಂಜೀವ ರೆಡ್ಡಿ, ತಮ್ಮ 8 ಎಕರೆ ಜಮೀನಿನಲ್ಲೇ ಆದಾಯದ ಮಾರ್ಗವನ್ನು ದುಪ್ಪಟ್ಟಾಗಿಸಿದ್ದಾರೆ.

ಇವರ ಜಮೀನಿನಲ್ಲಿ ಈಗಾಗಲೇ ತರಕಾರಿ ಜೊತೆ ಹೆಸರು, ಹತ್ತಿ, ಗೋವಿನಜೋಳ, ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ನಾನಾ ಫಲಗಳ ಮಿಶ್ರಣ ಭೂತಾಯಿಯ ಕಾಯಕವನ್ನು ಮನದಟ್ಟಾಗಿಸಿದೆ. ಅದರಂತೆ ರೈತ ಸಂಜೀವ ರೆಡ್ಡಿ ರೈತಾಪಿ ಬಾಳಲ್ಲಿ ಕೃಷಿಹೊಂಡ ತಂದ ಬದಲಾವಣೆ ಏನು ? ಎಂಬುದರ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ನಡೆಸಿದ ಚಿಟ್ ಚಾಟ್ ಇಲ್ಲಿದೆ ನೋಡಿ...

Edited By : Shivu K
PublicNext

PublicNext

10/08/2022 08:17 pm

Cinque Terre

156.51 K

Cinque Terre

0