ನರಗುಂದ : ಅಬ್ಬಾ ! ಕೃಷಿಹೊಂಡ ಎಷ್ಟು ಪರೋಪಕಾರಿ ಎಂಬುದಕ್ಕೆ ಕೇವಲ ಮನುಷ್ಯರ ರೈತಾಪಿ ಕಾಯಕವಷ್ಟೇ ಅಲ್ಲಾ ಪಶು, ಪಕ್ಷಿ, ಪ್ರಾಣಿ ಸಂಕುಲಕ್ಕೂ ಆ ನೀರು ದಣಿವು ತಣಿಸಿದೆ, ಬಾಯಾರಿಕೆ ನೀಗಿಸಿದೆ, ಎಲ್ಲದಕ್ಕಿಂತ ಮಿಗಿಲಾಗಿ ಅನ್ನದಾತನಲ್ಲಿ ಆತ್ಮಸ್ಥೈರ್ಯ ತಂದಿದೆ ಎಂತಾರೇ ರೈತ ಹಣುಮಂತಗೌಡ.
ಇರುವುದು ಒಂದೇ ಒಂದು ಎಕರೆ ಜಮೀನಾದರೂ ನರಗುಂದ ತಾಲೂಕಿನ ಯಾವಗಲ್ ಗ್ರಾಮದ ರೈತ ಹಣುಮಂತಗೌಡ ಬಸನಗೌಡ ಕಡದಳ್ಳಿ ಕೃಷಿಯಲ್ಲಿ ಜಯ ಕಂಡಿದ್ದಾರೆ ವಿಶ್ವಾಸದ ಲಯ ಕಂಡಿದ್ದಾರೆ.
ತಮ್ಮ ಒಂದು ಎಕರೆ ಜಮೀನಿನಲ್ಲಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ 75/75 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ತರಕಾರಿ ಬೆಳೆ ಜೊತೆ ಸಂಪೂರ್ಣ ವಾಣಿಜ್ಯ ಬೆಳೆ ಹೆಸರು ಬೆಳೆದು ಸಣ್ಣ ರೈತರು ಕೃಷಿಹೊಂಡದ ಕಾಯಕದ ಮೂಲಕ ಜಯ ಸಾಧಿಸುತ್ತಾರೆ ಆದಾಯ ಗಳಿಸುತ್ತಾರೆ ಎಂಬ ಸಂದೇಶವನ್ನು ರೈತ ಕುಲಕ್ಕೆ ಸಾರಿದ್ದಾರೆ.
ಒಣ ಬೇಸಾಯ ಬೆನ್ನಟ್ಟಿ ಆರಕ್ಕೆರದ ಮೂರಕ್ಕೆ ಇಳಿಯದ ಆದಾಯ ಕನಸನ್ನು ಕೃಷಿಹೊಂಡ ಸಾಕಾರ ಮಾಡಿದ್ದು ರೈತ ಹಣುಮಂತಗೌಡ ಎಕರೆ ಭೂಮಿಯಲ್ಲಿ ತರಕಾರಿ ಹಾಗೂ ವಾಣಿಜ್ಯ ಮಿಶ್ರ ಬೆಳೆ ಬೆಳೆದು ವಾರ್ಷಿಕ 2 ಲಕ್ಷ ಆದಾಯ ಗಳಿಸಿದ್ದಾರೆ.
ಇನ್ನೂ ಇದೇ ಒಣಬೇಸಾಯದಲ್ಲಿ ಎಕರೆ ಜಮೀನಿನಲ್ಲಿ ವಾರ್ಷಿಕ 80 ಸಾವಿರ ಆದಾಯ ಇದೀಗ 2 ಲಕ್ಷ ಕಂಡ ಹಿಂದೆ ರೈತ ಹಣುಮಂತಗೌಡರ ಬೆವರಿನ ಸಾರ್ಥಕತೆ, ಭೂಮಿಗೆ ಕಾಳಜಿ ಸಹ ಅಡಗಿದ್ದು, ಒಟ್ಟಾರೆ ಅನ್ನದಾತನ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ವರವಾಗಿದೆ ಎಂದ್ರೇ ತಪ್ಪಾಗಲಾರದು.
PublicNext
31/07/2022 05:26 pm