ನರಗುಂದ: ನಮ್ಮ ಯಾವುದೇ ಕೆಲಸ ಕಾರ್ಯದಲ್ಲಿ ಹೊಸ ಆಲೋಚನೆ, ಚಿಂತನೆ, ಬದಲಾವಣೆ ಇದ್ರೇ ಯಶಸ್ಸು ಸಾಧ್ಯ ಎನ್ನುವುದಕ್ಕೆ ಯಶಸ್ಸನ್ನು ಗಳಿಸಿದ ರೈತರೊಬ್ಬರು ಸ್ಫೂರ್ತಿಯಾಗಿದ್ದಾರೆ.
ಹೌದು... ಈ ರೈತನ ಜಮೀನಿನಲ್ಲಿ ಬೇಸರ ಕಳೆಯುವ ಬೆಳೆ, ದಣಿವು ತಣಿಸುವ ಹಣ್ಣು, ಹುಮ್ಮಸ್ಸು ನೀಡುವ ತರಕಾರಿ, ಉತ್ಸಾಹ ತುಂಬುವ ಮೀನು ಸಾಕಾಣಿಕೆ, ಜೊತೆಗೆ ಸಾಧನೆಗೆ ಸಹಕಾರಿ ಆಗಬಲ್ಲ ಕಬ್ಬು, ಬೇಸಾಯದ ಖರ್ಚಿಗೆ ನೆರವಾದ ಕರಿಬೇವು, ಸೇರಿದಂತೆ ನಾನಾ ಫಲಗಳ ಸಮ್ಮಿಶ್ರಣವೇ ಇದೆ.
ಆ ಸಮ್ಮಿಶ್ರಣ ಬೆಳೆಯ ಸಾಧಕರೇ ನರಗುಂದ ತಾಲೂಕಿನ ಯಾವಗಲ್ ಗ್ರಾಮದ ರೈತ ಬಸವರಾಜ ಯಲ್ಲಪ್ಪ ಉಡಕೇರಿ. ಓದಿದ್ದು ಪಿಯುಸಿ ಆದ್ರೂ, ಕೃಷಿಯಲ್ಲಿ ಮೇಲುಗೈ ಕಂಡು ದೇಶಪಾಂಡೆ ಫೌಂಡೇಶನ್ ಸಹಕಾರದ 100/100 ಸುತ್ತಳತೆಯ ಕೃಷಿಹೊಂಡದ ಜಲದ ಕೃಷಿಯಲ್ಲೇ ಜಗಜ್ಜಾಹೀರು ಆಗಲು ಹೊರಟಿದ್ದಾರೆ.
ಒಣಬೇಸಾಯ ಫಲದ ಜೊತೆ ನೀರಾವರಿಗೆ ಪ್ರಾಶಸ್ತ್ಯ ನೀಡಿ ಪಪ್ಪಾಯಿ, ನಿಂಬೆ, ಅಡಿಕೆ, ಪೇರು, ಮಹಾಗಣಿ, ಶ್ರೀಗಂಧ, ಕ್ಯಾಬೀಜ್, ಟೊಮೆಟೊ, ಕಬ್ಬು, ಉದ್ದು, ಹೆಸರು, ದಾಳಿಂಬೆ, ಸೇವಂತಿ, ಗಲಾಟೆ ಹೀಗೆ ನಾನಾ ಬೆಳೆ ಕೇವಲ 13 ಎಕರೆ ಜಮೀನಿನಲ್ಲೇ ಸೊಂಪಾಗಿ ಬೆಳೆದಿದ್ದಾರೆ.
ಕೃಷಿಯಲ್ಲೇ ಖುಷಿ ಕಂಡು ವಾರ್ಷಿಕ 4.50 ಲಕ್ಷಕ್ಕೂ ಅಧಿಕ ಆದಾಯದ ಕಂಡ ಇವರು ತೋಟದ ಕೃಷಿ ಯಾವಗಲ್ ಗ್ರಾಮಕ್ಕೆ ಮಾದರಿಯಾಗಿದ್ದು ಅದೆಷ್ಟೋ ಉತ್ಸಾಹಿ ಆಸಕ್ತ ರೈತರಿಗೆ ಬೆಳೆ ಮಾಹಿತಿ ನೀಡಿದ ಇವರು ದೇಶಪಾಂಡೆ ಫೌಂಡೇಶನ್ ಕೃಷಿ ಸಂಚಿಕೆಯ ಸಾಧಕರಾಗಿ ಭೂತಾಯಿ ಪುತ್ರರಿಗೆ ಮಾದರಿಯಾಗಿ ಕೃಷಿಹೊಂಡ ಕೃಷಿಯಲ್ಲಿ ಜಯ ಕಂಡಿದ್ದಾರೆ.
PublicNext
29/07/2022 03:26 pm