ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಂಹಗಳ ಎದುರು ವ್ಯಕ್ತಿಯ ಹೀರೋಗಿರಿ- ವಿಡಿಯೋ ಕಂಡು ನೆಟ್ಟಿಗರು ಶಾಕ್‌

ಮೃಗಾಲಯದಲ್ಲಿ ವನ್ಯಜೀವಿಗಳನ್ನು ದೂರದಿಂದಲೇ ನೋಡಿ ಆನಂದಿಸಬೇಕು. ಅದನ್ನು ಬಿಟ್ಟು ಹತ್ತಿರಕ್ಕೆ ಹೋಗಿ ಪ್ರಾಣ ಕಳೆದುಕೊಂಡ ಅದೇಷ್ಟೋ ಘಟನೆಗಳು ಈ ಹಿಂದೆ ನಡೆದಿವೆ. ಹೀಗಿದ್ದರೂ ವ್ಯಕ್ತಿಯೋರ್ವ ಸಿಂಹಗಳ ಮುಂದೆ ನಿಂತು ಹೀರೋಗಿರಿ ತೋರಿಸಿದ ಆಘಾತಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು nikulsinh_gohil ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ಕ್ಲಿಪ್‌ನಲ್ಲಿ ಯುವಕನೊಬ್ಬ ಸಿಂಹಗಳ ಆವರಣದಲ್ಲಿದ್ದ ಕೊಳಕ್ಕೆ ಇಳಿದಿರುವುದು ಕಾಣಿಸುತ್ತದೆ. ಈ ಕೊಳದ ದಡದಲ್ಲಿದ್ದ ಸಿಂಹಿಣಿ ಹಾಗೂ ಸಿಂಹಗಳತ್ತ ಕೈ ಬೆರಳು ತೋರಿಸುತ್ತಾ ಯುವಕ ಕುಚೇಷ್ಟೆ ಮಾಡಿದ್ದಾನೆ. ಈ ದೃಶ್ಯ ನೋಡಿದ್ದ ಜನರೆಲ್ಲಾ ಆತಂಕಗೊಂಡು ಅಲ್ಲಿಂದ ಈಚೆ ಬರುವಂತೆ ಯುವಕನಿಗೆ ಒತ್ತಾಯಿಸುತ್ತಿದ್ದರು. ಆದರೆ ಯುವಕ ಮಾತ್ರ ಅಲ್ಲಿಂದ ಬರುವುದಕ್ಕೆ ಸಿದ್ಧನಿರಲಿಲ್ಲ. ಇತ್ತ ಜನರು ಜೋರು ಶಬ್ದ ಮಾಡುತ್ತಿದ್ದರಿಂದ ಸಿಂಹಗಳು ಅಲ್ಲಿಂದ ಹಿಂದಕ್ಕೆ ಹೋಗಿದ್ದವು. ಇದಾದ ಬಳಿಕ ಎಲ್ಲರೂ ಸೇರಿ ಈ ಯುವಕನನ್ನು ಅಲ್ಲಿಂದ ಮೇಲಕ್ಕೆ ಎತ್ತಿ ಬಚಾವ್ ಮಾಡಿದ್ದಾರೆ.

ಆದರೆ ಈ ಘಟನೆ ನಡೆದಿದ್ದು 2016ರಲ್ಲಿ. ಅದು ಹೈದರಾಬಾದ್‌ ಝೂನಲ್ಲಿ ನಡೆದ ಘಟನೆಯಾಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಎಲ್ಲರೂ ಈ ದೃಶ್ಯ ಕಂಡು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.

Edited By : Shivu K
PublicNext

PublicNext

19/01/2022 07:44 am

Cinque Terre

29.96 K

Cinque Terre

0