ಮುಂಬೈ: ನಾಸಿಕ್ ಮತ್ತು ಔರಂಗಾಬಾದ್‌ನ ಸಗಟು ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಭಾರೀ ಕುಸಿತ ಕಂಡಿದೆ. ಇದರಿಂದಾಗಿ ರೈತರು ರಸ್ತೆ ಮಧ್ಯೆ ಹಾಗೂ ಹೆದ್ದಾರಿ ಪಕ್ಕದಲ್ಲಿ ಟೊಮೆಟೊ ಸುರಿದು ಅಸಮಾಧಾನ ಹೊರ ಹಾಕಿದ್ದಾರೆ.
ಹೌದು. ಸಗಟು ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಪ್ರತಿ ಕೆಜಿ 2ರಿಂದ 3 ರೂ. ಇದೆ. ಆದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಪ್ರತಿ ಕೆಜಿಗೆ 25ರಿಂದ 30 ರೂ. ಮಾರಾಟ ಮಾಡಲಾಗುತ್ತಿದೆ. ಇದು ರೈತರಿಗೆ ದೊಡ್ಡ ಮೋಸ ಎಂದು ಅನ್ನದಾತ ಕಿಡಿಕಾರಿದ್ದಾನೆ.
ಔರಂಗಾಬಾದ್ ಜಿಲ್ಲೆಯ ಗಂಗಾಪುರ ತಾಲೂಕಿನ ರೈತರು ಇಂದು ಬೆಳಗ್ಗೆ ಟ್ರ್ಯಾಕ್ಟರ್‌ನಲ್ಲಿ ತಂದಿದ್ದ ಟೊಮೆಟೊವನ್ನು ಹೆದ್ದಾರಿಯ ಬದಿಯಲ್ಲಿ ಸುರಿದು ಹೋಗಿದ್ದಾರೆ. ನಾಸಿಕ್‌ನಲ್ಲಿ ಕೂಡ ರೈತರು ಟೊಮೆಟೊವನ್ನು ರಸ್ತೆ ಸುರಿದು ಪ್ರತಿಭಟನೆ ನಡೆಸಿದ್ದಾರೆ.
PublicNext
27/08/2021 12:10 pm