ಚಿತ್ರದುರ್ಗ : ವಿದ್ಯುತ್ ಖಾಸಗೀಕರಣ ಹಾಗೂ ಇತ್ತೀಚಿನ ರೈತರ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲೆಯ ಹಿರಿಯೂರು ನಗರದಲ್ಲಿ ಪ್ರತಿಭಟನೆ ನಡೆಸಿದರು. ರೈತ ಪ್ರತಿಭಟನಾಕಾರರು ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಮೋದಿ ದೇಶ ವಿರೋಧಿ ಎಂದು ಘೋಷಣೆ ಕೂಗಿದರು.
ಹಣ ಗಳಿಕೆಯ ಪ್ರಮುಖ ಉದ್ದೇಶವಾಗಿರುವ ಖಾಸಗೀಯವರು ಕೃಷಿಯನ್ನು ಸಂಕಷ್ಟಕ್ಕೀಡುಮಾಡುವ ಎಲ್ಲ ಲಕ್ಷಣಗಳು ಸ್ಪಷ್ಟವಾಗಿರುವುದರಿಂದ ಸಿಟು + 50 ಜಾರಿಯಾಗುವರೆಗೂ ವಿದ್ಯುತ್ ನ್ನು ಖಾಸಗೀಯವರಿಗೆ ವಹಿಸಬಾರದು. ಕಳೆದ ಹದಿನೇಳು ತಿಂಗಳಿನಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೊಳಿಸಿರುವ ಎಲ್ಲ ರೈತ ವಿರೋಧಿ ಕಾನೂನುಗಳನ್ನು ಹಿಂಪಡೆದು ಕೃಷಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು. ಗಾಂಧಿ ಸರ್ಕಲ್ ನಿಂದ ಹೊರಟ ಪ್ರತಿಭಟನೆ ಬಸ್ ನಿಲ್ದಾಣ ತಲುಪಿ, ಮುಖ್ಯ ರಸ್ತೆಯ ಮೂಲಕ ತಾಲೂಕು ಕಛೇರಿಗೆ ಬಂದು ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ,ನಂತರ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
PublicNext
10/08/2021 07:27 pm