ನವದೆಹಲಿ: ರೈತರ ಟ್ರಾಕ್ಟರ್ rally ಯಲ್ಲಿ ನಡೆದ ಘಟನೆಗೆ ನಾನು ನಾಚಿಕೆ ಪಡುತ್ತೇನೆ. ಅದರ ಹೊಣೆ ಹೊರುತ್ತೇನೆ ಎಂದು ಸ್ವರಾಜ್ ಇಂಡಿಯಾದ ಅಧ್ಯಕ್ಷ ಯೋಗೇಂದ್ರ ಯಾದವ್ ಹೇಳಿದ್ದಾರೆ.
ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರತಿಭಟನೆಯಲ್ಲಿ ನಡೆಯುವ ಯಾವುದೇ ರೀತಿಯ ಹಿಂಸಾಚಾರ ಪ್ರಮಾದಕಾರಿ ಪರಿಣಾಮ ಬೀರುತ್ತದೆ. ಇದನ್ನು ಯಾರು ಮಾಡಿದರು, ಯಾರು ಮಾಡಿಲ್ಲ ಎಂದು ನಾನು ಈ ಸಂದರ್ಭದಲ್ಲಿ ಹೇಳಲು ಸಾಧ್ಯವಿಲ್ಲ. ಆದರೆ, ಮೇಲ್ನೋಟಕ್ಕೆ ರೈತರ ಪ್ರತಿಭಟನೆಯಿಂದ ನಾವು ಹೊರಗಿರಿಸಿದ ಜನರು ಇದನ್ನು ಮಾಡಿರುವಂತೆ ಕಾಣುತ್ತದೆ ಎಂದು ಯಾದವ್ ತಿಳಿಸಿದ್ದಾರೆ.
‘ನಾವು ಕೈಗೊಂಡ ತೀರ್ಮಾನಗಳಿಗೆ ಎಲ್ಲರೂ ಬದ್ಧರಾಗಿರಬೇಕು. ಯಾವುದೇ ಕಾರಣಕ್ಕೂ ದಾರಿತಪ್ಪಬಾರದು ಎಂದು ನಿರಂತರವಾಗಿ ಮನವಿ ಮಾಡಿದ್ದೇನೆ. ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಿದರೆ ಮಾತ್ರ ಆಂದೋಲನ ಯಶಸ್ವಿಯಾಗುತ್ತದೆ’ ಎಂದರು.
ಹಲವೆಡೆ ಪ್ರತಿಭಟನಾಕಾರರು ಪೊಲೀಸರೊಂದಿಗೆ ಸಂಘರ್ಷಕ್ಕಿಳಿದಿದ್ದಾರೆ. ಸತತ ಎರಡು ತಿಂಗಳಿನಿಂದ ಶಾಂತಯುತವಾಗಿ ನಡೆಸಿದ ಆಂದೋಲನ ಇದೀಗ ಹದಗೆಟ್ಟಿದ್ದು, ಹಿಂಸಾಚಾರದ ಹಿಂದೆ ಸಮಾಜವಿರೋಧಿ ಶಕ್ತಿಗಳು ನುಸುಳಿವೆ ಎಂದು ಆರೋಪಿಸಿದರು.
ಹಿಂಸಾಚಾರದಲ್ಲಿ ಒಬ್ಬ ರೈತ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
PublicNext
27/01/2021 01:59 pm