ನವದೆಹಲಿ : ಭಾರೀ ವಿರೋಧದ ಮಧ್ಯೆ ಜಾರಿಯಾದ ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ಪ್ರತಿಭಟನೆ ಹಾದಿ ಹಿಡಿದಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಅನ್ನದಾತರಿಗೆ ಸಂತೋಷದ ಸುದ್ದಿಯೊಂದನ್ನಾ ನೀಡಿದೆ.
ಹೌದು ಯಾವ ಮಸೂದೆ ಜಾರಿಯಿಂದ ಬೆಂಬಲ ಬೆಲೆ ಸಿಗುವುದಿಲ್ಲ ಎಂದು ಕಂಗಾಲಾಗಿದ್ದ ರೈತರಿಗೆ ಬೆಂಬಲ ಬೆಲೆ ಘೋಷಣೆ ತುಸು ನೆಮ್ಮದಿ ತಂದಿದೆ ಗೋಧಿ ಸೇರಿದಂತೆ ಒಟ್ಟು 6 ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಕೇಂದ್ರ ಸಚಿವ ಸಂಪುಟ ಅಸ್ತು ಎಂದಿದೆ.
(ಪ್ರತಿ ಕ್ವಿಂಟಾಲ್ ಗೆ) ಗೋಧಿ 50 ರೂಪಾಯಿ ಬೆಂಬಲ ಬೆಲೆ ಹೆಚ್ಚಳದೊಂದಿಗೆ 1975 ರೂ., ಕಡಲೆ 225 ರೂಪಾಯಿ ಏರಿಕೆಯೊಂದಿಗೆ 5100, ಮಸೂರ್ ದಾಲ್ ರೂಪಾಯಿ ಹೆಚ್ಚಳದೊಂದಿಗೆ 5100, ಬಾರ್ಲಿ 50 ರೂ. ಹೆಚ್ಚಳದೊಂದಿಗೆ 1600, ಸಾಸಿವೆ 225 ರೂಪಾಯಿ ಏರಿಕೆಯೊಂದಿಗೆ 4650 ಹಾಗೂ ಕುಸುಬೆ 112 ರೂಪಾಯಿ ಏರಿಕೆಯೊಂದಿಗೆ 5327 ರೂಪಾಯಿ ನಿಗದಿಪಡಿಸಲಾಗಿದೆ.
ಹೊಸ ಕೃಷಿ ಮಸೂದೆಯಿಂದ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆಯನ್ನ ವಿಸ್ತರಿಸಲು ಸಹಾಯ ಆಗುತ್ತದೆ.
ದೇಶದ ಯಾವುದೇ ಮೂಲೆಯಲ್ಲಾದರೂ ರೈತ ಸ್ವತಂತ್ರವಾಗಿ ತನ್ನ ಬೆಳೆಯನ್ನ ಮಾರಾಟ ಮಾಡಬಹುದಾಗಿದೆ.
PublicNext
22/09/2020 07:38 am