ಉತ್ತರಾಖಂಡ್ ನ ಘರ್ವಾಲ್ ಎಂಬಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಹಿಮಕುಸಿತದಿಂದ 28 ಪರ್ವತಾರೋಹಿಗಳು ಹಿಮಪಾತದಲ್ಲಿ ಸಿಲುಕಿದ್ದಾರೆ. ಅವರಲ್ಲಿ ಅನೇಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.ಸದ್ಯ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು, ಉತ್ತರಾಖಂಡದ ದ್ರೌಪದಿ ದಂಡ-2 ಶಿಖರಕ್ಕೆ ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್.ಸಿಬ್ಬಂದಿ ದೌಡಾಯಿಸಿದ್ದಾರೆ. ದ್ರೌಪದಿಯ ದಂಡ-2 ಪರ್ವತ ಶಿಖರದಲ್ಲಿ ಹಿಮಕುಸಿತದಲ್ಲಿ ಸಿಲುಕಿರುವ ಪ್ರಶಿಕ್ಷಣಾರ್ಥಿಗಳನ್ನು ರಕ್ಷಿಸಲು DRF ತಂಡಗಳು ಡೆಹ್ರಾಡೂನ್ ನ ಸಹಸ್ತ್ರಧಾರಾ ಹೆಲಿಪ್ಯಾಡ್ ನಿಂದ ಹೊರಟಿವೆ.
ಜಿಲ್ಲಾಡಳಿತದಿಂದ ತ್ವರಿತ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪಿ.ಎಸ್. ಧಾಮಿ ತಿಳಿಸಿದ್ದಾರೆ.ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಮಾತನಾಡಿ, ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸಲು ಸೇನೆಯ ಸಹಾಯ ಒದಗಿಸಲು ಮನವಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಅವಘಡದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ರಾಜನಾಥ್ ಸಿಂಗ್ ಸಾಂತ್ವನ ಹೇಳಿದ್ದಾರೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ನನ್ನ ಸಂತಾಪ ಎಂದು ಅವರು ಟ್ವೀಟ್ ಮಾಡಿದ್ದಾರೆ.
PublicNext
04/10/2022 03:30 pm