ಒಂದೊಮ್ಮೆ ವಾಹನ ಹತ್ತಿದ ಮೇಲೆ ಮೈಯಲ್ಲಾ ಕಣ್ಣಾಗಿರಬೇಕು. ಸ್ವಲ್ಪ ಯಾಮಾರಿದ್ರು ಅಪಾಯ ತಪ್ಪಿದ್ದಲ್ಲ.ಸದ್ಯ ಭೀಕರ ಅಪಘಾತದ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನೋಡುಗರ ಎದೆ ಝಲ್ ಎನ್ನುವಂತಿದೆ.ವಿಡಿಯೋದಲ್ಲಿ ಗಮನಿಸುವಂತೆ ಹೈದರಾಬಾದ್ ಸಮೀಪದ ಮೇದ್ಚಲ್ ನಲ್ಲಿ ಸೆಪ್ಟೆಂಬರ್ 29ರ ಗುರುವಾರ ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ಲಾರಿಗೆ ಡಿಕ್ಕಿಯಾಗಿ ಮೃತ ಪಟ್ಟಿರುವುದನ್ನು ಕಾಣಬಹುದು.
35 ವರ್ಷದ ಪ್ರಿಯಾ, ಖಾಸಗಿ ಸಂಸ್ಥೆಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದರು.ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದ ಪ್ರಿಯಾ ವಿಭಜಕದ ಬಳಿ ಮತ್ತೊಂದು ಬದಿಗೆ ಹೋಗಲು ಮುಂದಾಗಿದ್ದಾರೆ.ಈ ಸಂದರ್ಭದಲ್ಲಿ ಅತಿ ವೇಗವಾಗಿ ಬಂದ ಟ್ರಕ್ ಆಕೆಯ ಮೇಲೆ ಹರಿದಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಟ್ರಕ್ ಚಾಲಕ ಅಪಘಾತ ತಪ್ಪಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ.
PublicNext
30/09/2022 04:53 pm