ಮೈ ಮರೆತು ವಾಹನ ಚಲಾಯಿಸುತ್ತಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಸದ್ಯ ಈ ವಿಡಿಯೋ ಸಾಕ್ಷಿಯಾಗಿದೆ.ಹೌದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವಿಡಿಯೋ ನೀವು ನೋಡಿದರೆ ಎಂದಿಗೂ ಮೈಮರೆತು ವಾಹನ ಚಲಾಯಿಸುವುದಿಲ್ಲ. ಬೈಕ್ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮೇಲಕ್ಕೆ ಎಸೆದು ಐದು ಬಾರಿ ಪಲ್ಟಿ ಹೊಡೆದು ರಸ್ತೆಗೆ ಅಪ್ಪಳಿಸುವುದನ್ನು ಕಾಣಬಹುದು.
ವಿಡಿಯೋದಲ್ಲಿ ಕಾಣುವಂತೆ, ವೇಗವಾಗಿ ಬೈಕ್ ಓಡಿಸುತ್ತಿದ್ದ ವ್ಯಕ್ತಿಯೊಬ್ಬ ಎಡಕ್ಕೆ ತಿರುಗಿಸಿ ಇನ್ನೊಂದು ರಸ್ತೆಗೆ ಹೋಗಲು ಯತ್ನಿಸಿದ್ದಾನೆ. ಈ ವೇಳೆ ಮುಂಭಾಗದಿಂದ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಮೇಲಕ್ಕೆ ಎಸೆಯಲ್ಪಟ್ಟು ಕಾರಿನ ಮುಂಭಾಗದಿಂದ ಹಿಂಭಾಗಕ್ಕೆ ಐದು ಪಲ್ಟಿ ಹೊಡೆದು ನಂತರ ರಸ್ತೆಗೆ ಅಪ್ಪಳಿಸಿದ್ದಾನೆ. ನಂತರ ಬೈಕ್ ಸವಾರನ ಯಾವುದೇ ಚಲನೆ ಇಲ್ಲದಿರುವುದನ್ನು ಕಾಣಬಹುದು. ಆದರೆ ವ್ಯಕ್ತಿ ಬದುಕಿದ್ದಾನೋ ಮೃತಪಟ್ಟಿದ್ದಾನೊ ಎನ್ನುವ ವಿಚಾರ ತಿಳಿದು ಬಂದಿಲ್ಲ.
AccidentTraffi3 ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
PublicNext
25/09/2022 10:20 pm