ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕರಡಿ ದಾಳಿ : ಯುವಕ ಗಂಭೀರ

ಕಾರವಾರ : ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಪಂಚಾಯತಿ ಕೊಡಸೇ ಗ್ರಾಮದ ಜನಶೆಟ್ಟಿಕೊಪ್ಪ ಮಜಿರೆಯಲ್ಲಿ ಯುವಕನ ಮೇಲೆ ಕರಡಿ ದಾಳಿ ಮಾಡಿದೆ. ದಾಳಿಯಿಂದಾಗಿ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಎಪಿಎಂಸಿ ಸದಸ್ಯ ಲಾರೆನ್ಸ್ ಸಿದ್ದಿ ಪುತ್ರ ಸಂತೋಷ್ ಸಿದ್ದಿ(26) ಕರಡಿ ದಾಳಿಗೊಳಗಾದ ಯುವಕ. ಈತ ಜನಶೆಟ್ಟಿಕೊಪ್ಪದ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಕರಡಿ ಏಕಾಏಕಿ ದಾಳಿ ಮಾಡಿದೆ. ಸಂತೋಷ್ ತಲೆ, ಮುಖ ಹಾಗೂ ಕಣ್ಣಿಗೆ ಭಾರಿ ಪ್ರಮಾಣದಲ್ಲಿ ಗಾಯಗಳಾಗಿದ್ದು, ಗಾಯಾಳನ್ನು ಯಲ್ಲಾಪುರದ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಎಸ್ ಡಿಎಂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Edited By : Nirmala Aralikatti
PublicNext

PublicNext

08/09/2022 03:09 pm

Cinque Terre

29.56 K

Cinque Terre

0

ಸಂಬಂಧಿತ ಸುದ್ದಿ