ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎರಡು ಕಾರು, ಸ್ಕೂಟರ್ ನಡುವೆ ಡಿಕ್ಕಿ ; ಮಗು ಸೇರಿ ಮೂವರು ಸ್ಥಳದಲ್ಲೇ ಸಾವು

ಕಾರವಾರ : ಗೋವಾ ರಾಷ್ಟ್ರೀಯ ಹೆದ್ದಾರಿ 66 ಎನ ಮನೋಹರ್ ರ್ರೀಕರ್ ಬೈಪಾಸ್ ನಲ್ಲಿ ಕಾರೊಂದು ಮತ್ತೊಂದು ಕಾರು ಹಾಗೂ ಸ್ಕೂಟರ್ ಗೆ ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.ಪ್ರಾಥಮಿಕ ಮಾಹಿತಿ ಪ್ರಕಾರ, ಮಡಗಾಂವ್ನಿಂದ ಕಾರವಾರಕ್ಕೆ ತೆರಳುವ ವೇಳೆ ಅತಿವೇಗದಲ್ಲಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್ ಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಕಾರು ಬಲಬದಿಗೆ ಹಾರಿ, ಎದುರಿನಿಂದ ಕಾರವಾರದ ಸಾತೇರಿ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸ್ಸಾಗುತ್ತಿದ್ದ ಕುಟುಂಬವಿದ್ದ ಕಾರಿಗೆ ಡಿಕ್ಕಿಯಾಗಿ, ಮತ್ತೊದು ಸ್ಕೂಟರ್ ಗೂ ಬಡಿದಿದೆ.

ಘಟನೆಯಲ್ಲಿ ಸ್ಥಳದಲ್ಲೇ ಮಗು ಸೇರಿ ಮೂವರು ಮೃತಪಟ್ಟಿದ್ದು, ಗಂಭೀರ ಗಾಯಗೊಂಡಿರುವ 6 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Edited By : Nirmala Aralikatti
PublicNext

PublicNext

07/09/2022 09:38 pm

Cinque Terre

68.01 K

Cinque Terre

5