ಯಾದಗಿರಿ : ಮಗು ಆಟ ಆಡುವ ವೇಳೆ ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮ, ಶಾರ್ಟ್ ಸರ್ಕ್ಯೂಟ್ ಆಗಿ ಸ್ಥಳದಲ್ಲೇ ಮಗು ಮೃತಪಟ್ಟ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆ.ತಳ್ಳಳ್ಳಿ ಗ್ರಾಮದಲ್ಲಿ ನಡೆದಿದೆ.
ಅಜೀತ್ ಕುಮಾರ್ ತಂದೆ ಹಣಮಂತ್ರಾಯ ಹರನಾಳ ವಯಸ್ಸು (4) ವರ್ಷ ಎಂದು ತಿಳಿದು ಬಂದಿದೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಘಟನೆ ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇನ್ನು ಸುರಪುರ ತಾಲ್ಲೂಕಿನಾದ್ಯಂತ ಕೆಲ ಹಳ್ಳಿಗಳಲ್ಲಿ ವಿದ್ಯುತ್ ಕಂಬ ಹಾಗೂ ತಂತಿ ಬಹಳ ವರ್ಷಗಳ ಹಿಂದೆ ಹಾಕಿದ್ದು, ಮಳೆ-ಗಾಳಿ ಸಂದರ್ಭದಲ್ಲಿ ವೈರ್ ಕತ್ತರಿಸಿ ಬೀಳೋದು ಜಾಸ್ತಿಯಾಗಿದ್ದು, ಜೇಸ್ಕಾಂ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಹೊಸದಾಗಿ ವಿದ್ಯುತ್ ತಂತಿ ಹಾಕುವ ಕೆಲಸ ಮಾಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.
PublicNext
26/08/2022 07:54 pm