ಬೆಳಗಾವಿ: ನಿನ್ನೆ ಸಾಯಂಕಾಲ ವೇಳೆ ಬೆಳಗಾವಿ ತಾಲೂಕಿನ ಕುಬೇರ ಧಾಬಾ ಬಳಿ ಬಸ್ ಮತ್ತು ಬೈಕ್ ನಡುವೆ ಭಯಾನಕ ಅಪಘಾತವಾಗಿದೆ. ಬಸ್ ಚಕ್ರದಡಿ ಸಿಲುಕಿದ ಓರ್ವ ಬೈಕ್ ಸವಾರ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿತ್ತು. ಇನ್ನೋರ್ವನಿಗೆ ತೀವ್ರವಾದ ಗಾಯವಾಗಿದ್ದು ಇಬ್ಬರನ್ನು ಚಿಕಿತ್ಸೆಗಾಗಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗಾವಿಯಲ್ಲಿ ನಡೆದ ಈ ಭೀಕರ ಅಪಘಾತದ ಭಯಾನಕ ದೃಶ್ಯ ಇದೀಗ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯಗಳನ್ನು ನೋಡಿದವರು ಅಯ್ಯೋ ದೇವರೇ ಅನ್ನುತ್ತಿದ್ದಾರೆ. ಇದರ ಜತೆ ವಾಹನ ಚಲಿಸುವಾಗ ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿ ವಾಹನ ಚಾಲನೆ ಮಾಡಬೇಕು ಎಂಬ ಮಾತುಗಳು ಇದೀಗ ಕೇಳಿ ಬರುತ್ತಿದೆ.
ಆದರೆ ಅಪಘಾತದಲ್ಲಿ ನಡೆದ ಇಬ್ಬರಲ್ಲಿ ಓರ್ವ ಬೈಕ್ ಸವಾರ ಸಾವನ್ನಪ್ಪಿದ್ದು ಇನ್ನೋರ್ವನ ಬಗ್ಗೆಯೂ ಹೆಚ್ಚಿನ ಮಾಹಿತಿ ಇನ್ನಷ್ಟು ಸಿಗಬೇಕಾಗಿದೆ.
PublicNext
12/08/2022 01:09 pm