ಅಮರಾವತಿ: ಆಂಧ್ರ ಪ್ರದೇಶದ ಗಾರ್ಮೆಂಟ್ ಫ್ಯಾಕ್ಟರಿಯೊಂದರಲ್ಲಿ ವಿಷಾನಿಲ ಸೋರಿಕೆಯಾಗಿ ನೌಕರರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕಂಪನಿಯ ಸುಮಾರು 50ಕ್ಕೂ ಅಧಿಕ ಮಹಿಳಾ ನೌಕರರನ್ನು ಮಂಗಳವಾರ ರಾತ್ರಿ ಆಸ್ಪತ್ರಗೆ ದಾಖಲಿಸಲಾಗಿದೆ. ಅವರಿಗೆ ವಾಂತಿ ಮತ್ತು ವಾಕರಿಕೆಯ ಉಂಟಾಗಿದ್ದು, ಅಸ್ವಸ್ಥಗೊಂಡಿದ್ದಾರೆ.
ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯಲ್ಲಿ ಅಚ್ಯುತಪುರಂ ಸಮೀಪ ಇರುವ ಕಾರ್ಖಾನೆಯಲ್ಲಿ ದುರ್ಘಟನೆ ನಡೆದಿದೆ. ಈ ಕಾರ್ಖಾನೆಯಲ್ಲಿ ಸುಮಾರು 4 ಸಾವಿರ ಕಾರ್ಮಿಕರು 'ಬಿ' ಶೀಫ್ಟ್‌ನಲ್ಲಿ ಕೆಲಸ ಮಾಡುತ್ತಿದ್ದು, ಈ ಪೈಕಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ವಿಷಾನಿಲ ಸೇವನೆಯಿಂದ ಉದ್ಯೋಗಿಗಳು ಸ್ಥಳದಲ್ಲೇ ವಾಂತಿ ಮಾಡಿಕೊಂಡು ಮೂರ್ಛೆ ಹೋಗಿ ಬಿದ್ದರು. ತಕ್ಷಣವೇ ಅಸ್ವಸ್ಥಗೊಂಡ ಕೆಲವರಿಗೆ ಕಾರ್ಖಾನೆ ಆವರಣದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಉಳಿದವರನ್ನು ಅಚ್ಯುತಪುರಂ ಮತ್ತು ಅನಕಾಪಲ್ಲಿಯಲ್ಲಿರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಕಾರ್ಖಾನೆಯ ಬಸ್‌ಗಳು, ಕಾರುಗಳು ಮತ್ತು ಆಂಬ್ಯುಲೆನ್ಸ್‌ಗಳಲ್ಲಿ ಸಾಗಿಸಲಾಗಿದೆ.
PublicNext
03/08/2022 07:36 am