ಆನೇಕಲ್/ಚೆನ್ನೈ: ಕಬಡ್ಡಿ ಆಟವಾಡುತ್ತಲೇ ಆಟಗಾರನೊಬ್ಬ ಕಬಡ್ಡಿ ಕೋರ್ಟ್ ನಲ್ಲಿ ಕೊನೆಯುಸಿರೆಳೆದ ಘಟನೆ ತಮಿಳುನಾಡಿನ ಕುಡ್ಡಲೂರು ಜಿಲ್ಲೆಯ ಮಂಡಕ್ಕಿ ಗ್ರಾಮದಲ್ಲಿ ನಡೆದಿದೆ. ಹೌದು ಕಬಡ್ಡಿ ಆಡುತ್ತಿರುವ ವೇಳೆ ಹಠಾತ್ ಹೃದಯಾಘಾತ ಸಂಭವಿಸಿ 22 ವರ್ಷದ ವಿದ್ಯಾರ್ಥಿ ವಿಮಲ್ ರಾಜ್ ಮೃತಪಟ್ಟಿದ್ದಾನೆ. ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಎರಡನೇ ವರ್ಷದ BSc Zoology ಓದುತ್ತಿದ್ದ.
ಸೇಲಂ ಜಿಲ್ಲೆಯಲ್ಲಿರುವ ಖಾಸಗಿ ಖಾಲೇಜಿನಲ್ಲಿ ಓದುತ್ತಿದ್ದ ವಿಮಲ್ ರಾಜ್, ವೀಕೆಂಡ್ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದ. ಜಿಲ್ಲಾ ಮಟ್ಟದ ‘ಮುರಟ್ಟು ಕಾಲೈ ಟೀಂ’ ಕಬಡ್ಡಿ ತಂಡವನ್ನ ವಿದ್ಯಾರ್ಥಿ ಪ್ರತಿನಿಧಿಸುತ್ತಿದ್ದ ಎನ್ನಲಾಗಿದೆ. ಪಂದ್ಯದ ವೇಳೆ ಎದುರಾಳಿ ತಂಡದ ಆಟಗಾರರ ಮೇಲೆ ರೈಡಿಂಗ್ ಹೋದಾಗ ಏಕಾಏಕಿ ಹೃದಯಾಘಾತ ಸಂಭವಿಸಿದೆ. ಕೂಡಲೇ ಅವರನ್ನ ಪಣರುಟಿ ಜನರಲ್ ಆಸ್ಪತ್ರೆಗೆ ದಾಖಲಿದ್ದು ವೈದ್ಯರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
PublicNext
26/07/2022 05:06 pm