ಕೊರಟಗೆರೆ : ತುಮಕೂರು ನಗರದಿಂದ ಮಧುಗಿರಿಗೆ ಲಾರಿಯಲ್ಲಿ ಸಾಗಾಟವಾಗುತ್ತಿದ್ದ ಭತ್ತದ ಹೊಟ್ಟಿನ ಚೀಲಗಳು ಬೈಪಾಸ್ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಇದರಿಂದ ಕೆಲಕಾಲ ಹೆದ್ದಾರಿ ಸಂಚಾರದಲ್ಲಿ ಕಿರಿಕಿರಿಯಾಗಿತ್ತು. ಬಳಿಕ ಚೀಲಗಳನ್ನು ತೆರುವುಗೊಳಿಸುವವರೆಗೂ ಬೈಪಾಸ್ ನಲ್ಲಿ ಒಂದು ಬದಿಯಲ್ಲಿ ವಾಹನ ಓಡಾಟಕ್ಕೆ ಅನುವು ಮಾಡಿಕೊಡಲಾಗಿತ್ತು.
ಇನ್ನು ಜೋರಾಗಿ ಬೀಸಿದ ಗಾಳಿಯಿಂದಾಗಿ ಚೀಲಕ್ಕೆ ಕಟ್ಟಿದ ಹಗ್ಗ ತುಂಡಾದ ಪರಿಣಾಮ ಈ ಸಮಸ್ಯೆ ಉಂಟಾಗಿತ್ತು. ಸದ್ಯ ಎಲ್ಲವೂ ತಿಳಿಯಾಗಿದ್ದು ಯಾವುದೇ ತೊಂದರೆಯಾಗಿಲ್ಲ.
PublicNext
25/07/2022 08:20 am