ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಲಿಸುತ್ತಿದ್ದ ವಾಹನದ ಮೇಲೆ ಶಕ್ತಿಮಾನ್ ರೀತಿ ಸ್ಟಂಟ್.!- ಜೀವಕ್ಕೆ ಕುತ್ತು ತಂದುಕೊಂಡ ಯುವಕ

ಲಕ್ನೋ: ಯುವಕನೋರ್ವ ಕಸ ಸಾಗಿಸುವ ವಾಹನದ ಮೇಲೆ ಫುಶ್ ಅಪ್‌ ಜೊತೆ ಏನೇನೋ ಸರ್ಕಸ್ ಮಾಡಲು ಹೋಗಿ ಕಸ ಸಾಗಿಸುವ ಲಾರಿಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶ್ವೇತ ಶ್ರೀವಾಸ್ತವ್ ಎಂಬುವವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ. ಚಲಿಸುತ್ತಿರುವ ಕಸದ ವಾಹನದ ಮೇಲೆ ಯುವಕನೊಬ್ಬ ಪುಶ್ ಅಪ್ಸ್‌ ಮಾಡುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಹೀಗೆ ವಾಹನ ಸಾಗುತ್ತಿರುವಾಗಲೇ ಸಾಹಸ ಪ್ರದರ್ಶಿಸುವ ಈತ ಬಳಿಕ ನಿಂತು ಸಾಗುತ್ತಾನೆ. ಇದಾದ ಬಳಿಕ ಆಗುವುದೇ ಬೇರೆ.! ಈತನ ಈ ಹುಚ್ಚಾಟದ ನಂತರ ಆಗಿದ್ದೇನು ಎಂಬುದನ್ನೂ ಈ ವಿಡಿಯೋದಲ್ಲಿ ತೋರಿಸಲಾಗಿದೆ. ಸ್ಟಂಟ್ ವೇಳೆ ಆಯತಪ್ಪಿ ಬಿದ್ದಿದ್ದ ಈತನಿಗೆ ಭಾರೀ ಗಾಯಗಳಾಗಿತ್ತು. ಈ ಫೋಟೋಗಳನ್ನು ನೋಡುವಾಗಲೇ ದಿಗಿಲಾಗುತ್ತದೆ.

ಇದು ಲಕ್ನೋದ ಗೋಮತಿನಗರದಲ್ಲಿ ರಾತ್ರಿ ಕಂಡ ನೋಟ ಎಂದು ಉಲ್ಲೇಖಿಸಿರುವ ಶ್ವೇತ ಶ್ರೀವಾಸ್ತವ್ ಅವರು, 'ದಯವಿಟ್ಟು ಇಂತಹ ಮಾರಣಾಂತಿಕ ಸಾಹಸಗಳನ್ನು ಮಾಡಬೇಡಿ' ಎಂದು ಕಿವಿಮಾತು ಹೇಳಿದ್ದಾರೆ.

Edited By : Vijay Kumar
PublicNext

PublicNext

19/07/2022 11:37 am

Cinque Terre

40.66 K

Cinque Terre

1

ಸಂಬಂಧಿತ ಸುದ್ದಿ