ಮಳೆಗಾಲದಲ್ಲಿ ಜಲಾಶಯ, ಸರೋವರ, ಸಮುದ್ರ ಸೇರಿದಂತೆ ನೀರಿರುವ ಸ್ಥಳಗಳಿಗೆ ಹೋದಾಗ ಸ್ವಲ್ಪ ಜಾಗರೂಕರಾಗಿರಬೇಕು. ಸ್ವಲ್ಪ ಯಾಮಾರಿದ್ರೂ ಬದುಕುಳಿಯುವುದೇ ಡೌಟ್.
ಸದ್ಯ ಐಪಿಎಸ್ ಅಧಿಕಾರಿ ಶಿಖಾ ಗೋಯೆಲ್ ಮಳೆಗಾಲದಲ್ಲಿ ಸಮುದ್ರದಲ್ಲಿ ಮಜಾ ಮಾಡುತ್ತಿರುವವರು ನೀರು ಪಾಲಾದ ವಿಡಿಯೋವೊಂದನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ದೊಡ್ಡ ವಿಷಾದಕ್ಕಿಂತ ಸ್ವಲ್ಪ ಎಚ್ಚರಿಕೆ ಉತ್ತಮ. ತೀವ್ರ ಮಳೆಯ ಎಚ್ಚರಿಕೆ ನೀಡಿದಾಗ ಹೆಚ್ಚು ಜಾಗರೂಕರಾಗಿರಿ ಎಂದು ಶೀರ್ಷಿಕೆ ಬರೆದಿದ್ದಾರೆ.
ಸದ್ಯ ಎಲ್ಲೆಡೆ ಭಾರಿ ಮಳೆಯಾಗುತ್ತಿದ್ದು ಗುಡ್ಡ ಕುಸಿತ, ರಸ್ತೆ ಸಂಪರ್ಕ ಕಡಿತ, ಜಲಾಶಯಗಳ ನೀರಿನ ಮಟ್ಟ ಹೆಚ್ಚಾಗಿದೆ. ಮೋಜು ಮಸ್ತಿ ಗುಂಗಲ್ಲಿ ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳಬೇಡಿ.
PublicNext
12/07/2022 04:10 pm