ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಣಿಗಲ್: ದರ್ಶನ ಮುಗಿಸಿ ಬರುವಾಗ ಕಾರು ಪಲ್ಟಿ: ಬಾಲಕ ಸಾವು, ಪೋಷಕರಿಗೆ ಗಾಯ

ಕುಣಿಗಲ್: ದೇವರ ದರ್ಶನಕ್ಕೆ ಹೋಗಿ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದ ವೇಳೆ ಕಾರು ಪಲ್ಟಿಯಾಗಿದೆ. ಪರಿಣಾಮ ದಂಪತಿ ತೀವ್ರವಾಗಿ ಗಾಯಗೊಂಡು ಮಗು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.

ಕುಣಿಗಲ್ ತಾಲೂಕಿನ ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ದುರ್ಘಟನೆ ಸಂಭವಿಸಿದೆ. ಕುಣಿಗಲ್ ತಾಲೂಕಿನ ನಾಗೇಗೌಡನಪಾಳ್ಯ ಗೇಟ್ ಬಳಿ ದುರ್ಘಟನೆ ಸಂಭವಿಸಿದೆ. ತಾಯಿ ರಮ್ಯ ಮತ್ತು ತಂದೆ ಪರಮೇಶ್‌ಗೆ ತೀವ್ರ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 5 ವರ್ಷದ ಸಮರ್ಥ್ ಸ್ಥಳದಲ್ಲೇ ಮೃತಪಟ್ಟಿದ್ದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಅಮೃತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Edited By : Nagaraj Tulugeri
PublicNext

PublicNext

09/07/2022 07:42 pm

Cinque Terre

33.65 K

Cinque Terre

0

ಸಂಬಂಧಿತ ಸುದ್ದಿ