ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಲೆಕ್ಟ್ರಿಕ್ ಬೈಕ್ ಗೆ ಲಾರಿ ಡಿಕ್ಕಿ : ತಾಯಿ, ಮಗ ಸ್ಥಳದಲ್ಲೇ ಸಾವು

ಹಾಸನ: ಎಲೆಕ್ಟ್ರಿಕ್ ಬೈಕ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ತಾಯಿ ಸೀಮಾ (38), ಮಗ ಮಯೂರ (12) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾಸನ ಹೊರವಲಯದ ಬಿ.ಟಿ ಕೊಪ್ಪಲ್ ಬಳಿ ನಡೆದಿದೆ. ಇನ್ನು ಮೃತರು ಮೂಲತಃ ಕೊಡಗು ಜಿಲ್ಲೆ ಶನಿವಾರಸಂತೆ ಮೂಲದವರು ಮಗನ ವ್ಯಾಸಂಗದ ಹಿನ್ನೆಲೆಯಲ್ಲಿ ತಿಂಗಳ ಹಿಂದಷ್ಟೇ ಹಾಸನಕ್ಕೆ ಬಂದಿದ್ದರು.

ಇನ್ನು ವಿಷಾಧಕರ ಸಂಗತಿ ಎಂದರೆ ಮೃತ ಸೀಮಾ ಪತಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ವಾರದ ಹಿಂದಷ್ಟೇ ಪತ್ನಿ-ಮಗನನ್ನು ನೋಡಿಕೊಂಡು ಮರಳಿ ಸೇವೆಗೆ ಹೋಗಿದ್ದಾರೆ.ಇಂದು ಸೀಮಾ ಎಂದಿನಂತೆ ಮಗನನ್ನು ಶಾಲೆಗೆ ಬಿಡಲು ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮಗ ಸ್ಥಳದಲ್ಲಿಯೇ ಉಸಿರು ಚಲ್ಲಿದ್ದಾರೆ.

ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಲಾರಿ ವಶಕ್ಕೆ ಪಡೆದಿದ್ದಾರೆ. ಇನ್ನು ಲಾರಿ ಚಾಲಕನ ನಿರ್ಲಕ್ಷ್ಯದಿಂದಲೇ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

Edited By : Nirmala Aralikatti
PublicNext

PublicNext

08/07/2022 11:54 am

Cinque Terre

85.13 K

Cinque Terre

29

ಸಂಬಂಧಿತ ಸುದ್ದಿ