ಪಾಟ್ನಾ: ಬಿಹಾರದ ಭೆಲ್ವಾ ರೈಲು ನಿಲ್ದಾಣದ ಬಳಿ ಚಲಿಸುತ್ತಿದ್ದ ಡೆಮು ರೈಲಿನ ಇಂಜಿನ್ನಲ್ಲಿ ಇಂದು ಬೆಳಗ್ಗೆ ದಿಢೀರ್ ಬೆಂಕಿ ಕಾಣಿಸಿಕೊಂಡು ಆತಂಕ ಉಂಟಾಯಿತು. ಅದೃಷ್ಟವಶಾತ್ ಬೆಂಕಿಯು ಬೋಗಿಗಳಿಗೆ ಹಬ್ಬಿಲ್ಲ, ಇದರಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಈ ರೈಲು ರಕ್ಸಾಲ್‌ನಿಂದ ನರ್ಕಟಿಯಾಗಂಜ್‌ಗೆ ತೆರಳುತ್ತಿತ್ತು. ಇಂಜಿನ್ಗೆ ಬೆಂಕಿ ಹೊತ್ತಿಕೊಂಡ ಕಾರಣ ತಿಳಿದುಬಂದಿಲ್ಲ. ಎಲ್ಲ ಪ್ರಯಾಣಿಕರನ್ನು ರೈಲಿನಿಂದ ಸುರಕ್ಷಿತವಾಗಿ ಇಳಿಸಲಾಗಿದೆ. ಬೆಂಕಿ ಇತರೆ ಬೋಗಿಗಳಿಗೆ ಹರಡಿಲ್ಲ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.
PublicNext
03/07/2022 01:49 pm