ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಲಾರಿ-ಕಾರು ಡಿಕ್ಕಿಯಾಗಿ ಮೂವರ ಸಾವು: ಇನ್ನೋರ್ವನ ಸ್ಥಿತಿ ಗಂಭೀರ

ಮಂಡ್ಯ: ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟು ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಮಂಡ್ಯ ನಗರದ ಎಂ. ಹೊಸೂರು ಗೇಟ್ ಬಳಿ ಘಟನೆ ನಡೆದಿದೆ.

ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ನಾಗಮಂಗಲ ತಾಲೂಕಿನ ಬಿರೇಶ್ವರಪುರ ಗ್ರಾಮದ ದೇವರಾಜು (45) ಹಾಗೂ ಪಾಂಡವಪುರ ತಾಲೂಕಿನ ವದೆಸಮುದ್ರ ಗ್ರಾಮದ ಮಂಜುನಾಥ್ (40) ಹಾಗೂ ಇನ್ನೋರ್ವ ವ್ಯಕ್ತಿ ದಾರುಣವಾಗಿ ಮೃತಪಟ್ಟಿದ್ದಾರೆ. ದೇವರಾಜು ಅವರುಪಾಂಡವಪುರ ತಾಲೂಕಿನ ಕೆನ್ನಾಳು ವೃತ್ತದ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹಾಗೂ ಮಂಜುನಾಥ್ ಅವರು ಕನಗನಮರಡಿ ವೃತ್ತದ ಗ್ರಾಮ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇನ್ನು ಗಾಯಾಳು ಸ್ವಾಮಿ ಎಂಬಾತರು ದಾಮಡಹಳ್ಳಿ ವೃತ್ತದ ಗ್ರಾಮ ಸಹಾಯಕನಾಗಿದ್ದಾರೆ.

ಮೃತ ದೇವರಾಜು ತಮ್ಮ ಜಮೀನಿನ ಕೆಲಸಕ್ಕಾಗಿ ಇಬ್ಬರು ಗ್ರಾಮ ಸಹಾಯಕರು ಹಾಗೂ ಒಬ್ಬ ರೈತ ಕಾರ್ಮಿಕನನ್ನು ಕರೆತಂದು ಪಾಂಡವಪುರಕ್ಕೆ ವಾಪಸ್ ತೆರಳುವಾಗ ಈ ಅಪಘಾತ ಸಂಭವಿಸಿದೆ. ಮೈಸೂರು ಕಡೆಯಿಂದ ಬೆಳಗಾವಿ ಕಡೆಗೆ ಸಂಚರಿಸುತ್ತಿದ್ದ ಲಾರಿಗೆ ಕಾರು ಡಿಕ್ಕಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಗಾಯಾಳು ಸ್ವಾಮಿಗೆ ಬಿ.ಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಗಮಂಗಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

Edited By : Somashekar
PublicNext

PublicNext

26/06/2022 02:19 pm

Cinque Terre

71.65 K

Cinque Terre

1

ಸಂಬಂಧಿತ ಸುದ್ದಿ