ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೋರ್ವೆಲ್ ಗೆ ಬಿದ್ದ ಮಗು ಕಾಪಾಡಿದ ಭಾರತೀಯ ಸೈನಿಕರು ; ವಿಡಿಯೋ ವೈರಲ್

ಅಹಮದಾಬಾದ್ : ಬರೋಬ್ಬರಿ 300 ಅಡಿ ಆಳದ ಬೋರ್ವೆಲ್ ಗೆ ಬಿದ್ದಿದ್ದ 18 ತಿಂಗಳ ಮಗುವನ್ನು ಭಾರತೀಯ ಸೇನೆ ರಕ್ಷಿಸಿದೆ. ಇನ್ನು ಸಮಯಕ್ಕೆ ಸರಿಯಾಗಿ ಚಾಣಾಕ್ಷತನ ಮೆರೆದಿರುವ ಸೇನೆ, ಕೊಳವೆ ಬಾವಿಯಿಂದ ಮಗುವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದೆ. ಸೇನೆಯ ರಕ್ಷಣಾ ಕಾರ್ಯಾಚರಣೆ ವೀಡಿಯೋ ಈಗ ವೈರಲ್ ಆಗಿದೆ.

ಗುಜರಾತ್ ನ ಸುರೇಂದ್ರನಗರ ಜಿಲ್ಲೆಯ ಧ್ರಂಗಾಧ್ರ ತಾಲೂಕಿನಿಂದ 20 ಕಿಲೋ ಮೀಟರ್ ದೂರದಲ್ಲಿರುವ ದುದಾಪುರ ಗ್ರಾಮದಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 300 ಅಡಿ ಬೋರ್ ವೆಲ್ ಗೆ ಆಕಸ್ಮಿಕವಾಗಿ ಬಿದ್ದಿದ್ದ ಒಂದೂವರೆ ವರ್ಷದ ಬಾಲಕ ಶಿವಂ ಬದುಕುಳಿದಿದ್ದಾನೆ.

Edited By : Nirmala Aralikatti
PublicNext

PublicNext

09/06/2022 05:49 pm

Cinque Terre

48.05 K

Cinque Terre

6

ಸಂಬಂಧಿತ ಸುದ್ದಿ