ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕನ್ ತಿಂದು ವಿದ್ಯಾರ್ಥಿ ಸಾವು

ಚೆನ್ನೈ: ತಂದೂರಿ ಚಿಕನ್ ಮತ್ತು ಫ್ರೈಡ್ ರೈಸ್ ತಿಂದು ದ್ವಿತೀಯ ಪಿಯು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಿರುಮುರುಗನ್ (17) ಮೃತ ವಿದ್ಯಾರ್ಥಿ. ಈತ ತಿರುವಣ್ಣಾಮಲೈ ಜಿಲ್ಲೆಯ ಅರಣಿ ಪಟ್ಟಣದ ಆಪಲ್ ಶಾಲೆಯ ಮಾಲೀಕ ಗಣೇಶ್ (ಆಪಲ್ ಗಣೇಶ್) ಅವರ ಪುತ್ರ.

ಮೇ 24ರಂದು ಅರಣಿ ಟೌನ್ ಗಾಂಧಿ ರಸ್ತೆಯ 5 ಸ್ಟಾರ್ ಎಲೈಟ್ ಹೋಟೆಲ್ ನಲ್ಲಿ ಸ್ನೇಹಿತರೊಂದಿಗೆ ಚಿಕನ್ ತಂದೂರಿ ಮತ್ತು ಫ್ರೈಡ್ ರೈಸ್ ಸೇವಿಸಿದ್ದ. ಅಂದು ರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡು ವಾಂತಿಯಾಗಿದೆ. ಮರುದಿನ ಬೆಳಗ್ಗೆ ಕುಟುಂಬಸ್ಥರು ತಿರುಮುರುಗನ್ ನನ್ನು ಸಮೀಪದ ಖಾಸಗಿ ಕ್ಲಿನಿಕ್ ಗೆ ಕರೆದೊಯ್ದರಾದರೂ ಪ್ರಯೋಜನವಾಗಲಿಲ್ಲ. ತಿರುಮುರುಗನ್ ಕೊನೆಯುಸಿರೆಳೆದ.

ಇದಕ್ಕೆ ಕಾರಣ ಹೋಟೆಲ್ ನಲ್ಲಿ ತಿಂದ ತಂದೂರಿ ಚಿಕನ್. ಆಹಾರವು ವಿಷಪೂರಿತ ಆಗಿದ್ದರಿಂದಲೇ ಮಗ ಸತ್ತಿದ್ದಾನೆ ಎಂದು ಮೃತನ ತಂದೆ ಗಣೇಶ್ ಅರಣಿ ಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ.

Edited By : Nirmala Aralikatti
PublicNext

PublicNext

02/06/2022 08:59 pm

Cinque Terre

48.75 K

Cinque Terre

5

ಸಂಬಂಧಿತ ಸುದ್ದಿ