ನೇಪಾಳ: ಪತಿ ಮತ್ತು ಪತ್ನಿ ಜಗಳವಾಡಿದ್ದಾರೆ. ಇನ್ನೆಂದೂ ಜೊತೆಗೆ ಇರಲೇ ಬಾರದು ಅಂತಲೂ ನಿರ್ಧರಿಸಿದ್ದಾರೆ. ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆದಿದ್ದರು. ಆದರೆ, ಇಡೀ ಜೀವನ ದೂರವೇ ಇರಬೇಕು ಅಂದುಕೊಂಡವರನ್ನ ವಿಧಿ ಸಾವಿನಲ್ಲೂ ಬಿಡದೇ ಒಂದು ಮಾಡಿ ಬಿಟ್ಟಿದೆ.
ವೈಭವ ತ್ರಿಪಾಠಿ ಹಾಗೂ ಮಾಜಿ ಪತ್ನಿ ಅಶೋಕ್ ತ್ರಿಪಾಠಿ ವಿಚ್ಛೇದನ ಪಡೆದವರು. ಆದರೆ, ನ್ಯಾಯಾಲಯ ಈ ಜೋಡಿಗೆ ಒಟ್ಟಿಗೆ ಒಮ್ಮೆ ನೀವೂ ನಿಮ್ಮ ಮಕ್ಕಳ ಜೊತೆಗೆ ವಿದೇಶಿ ಪ್ರವಾಸ ಮಾಡಿ ಎಂದು ಆದೇಶವನ್ನೂ ನೀಡಿತ್ತು.
ಆ ಪ್ರಕಾರ ಈ ವಿಚ್ಛೇದಿತರು ಮಕ್ಕಳ ಜೊತೆಗೆ ನೇಪಾಳಕ್ಕೆ ಪ್ರವಾಸಕ್ಕೆ ಬಂದಿದ್ದರು. ಆದರೆ, ದುರಂತ ನೋಡಿ, ಅವರಿದ್ದ ವಿಮಾನ ಪತನಗೊಂಡಿದೆ. ಮಕ್ಕಳ ಜೊತೆಗೆ ವಿಚ್ಛೇದಿತ ದಂಪತಿನೂ ಮೃತಪಟ್ಟಿದ್ದಾರೆ. ಜೀವನದಲ್ಲಿ ಒಂದಾಗೋದೇ ಬೇಡ ಎಂದವರನ್ನ ವಿಧಿ ಸಾವಿನಲ್ಲಿ ಶಾಶ್ವತವಾಗಿಯೇ ಒಂದು ಮಾಡಿ ಬಿಟ್ಟಿದೆ.
PublicNext
30/05/2022 01:25 pm