ಗದಗ: ತಾಲೂಕಿನ ಶಾಗೋಟಿ ಗ್ರಾಮದ ಇಬ್ಬರು ವಿದ್ಯಾರ್ಥಿಗಳು ಶುಕ್ರವಾರ ಮಣ್ಣಿನ ಕ್ವಾರಿಯಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ್ದರು. ನಿನ್ನೆ ಅಗ್ನಿಶಾಮಕ ದಳದಿಂದ ಶೋಧ ಕಾರ್ಯಾಚರಣೆ ನಡೆದಿದ್ದರೂ ರಾತ್ರಿಯಾದ ಕಾರಣ ಹುಡುಕಾಟ ಸ್ಥಗಿತಗೊಳಿಸಿದ್ದರು. ಇಂದು ಮತ್ತೆ ಶೋಧ ಕಾರ್ಯ ಮುಂದುವರಿಸಿ ಮೃತದೇಹಗಳನ್ನು ಹೊರ ತೆಗೆದಿದ್ದಾರೆ.
ತಾಲೂಕಿನ ಶಾಗೋಟಿ ಹಾಗೂ ಚಿಕ್ಕಹಂದಿಗೋಳ ಗ್ರಾಮಗಳ ಮಧ್ಯೆ ಇರುವ ಮಣ್ಣಿನ ಕ್ವಾರಿಯಲ್ಲಿ ಈ ವಿದ್ಯಾರ್ಥಿಗಳು ಈಜಲು ತೆರಳಿದ್ದರು. ಶಾಗೋಟಿ ಗ್ರಾಮದ ಬಸವರಾಜ ರೋಣದ(17) ಹಾಗೂ ಈರಪ್ಪ ಜೋಡಿಗೇರ ಮೃತಪಟ್ಟವರು.
ವಿದ್ಯಾರ್ಥಿಗಳ ಮೃತದೇಹಗಳಿಗಾಗಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ಬೋಟ್ ಮೂಲಕ ಶೋಧ ಕಾರ್ಯ ನಡೆಸಿದ್ದರು. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದಾರುಣ ಘಟನೆ ನಡೆದಿದೆ.
PublicNext
30/04/2022 07:03 pm