ದಾವಣಗೆರೆ: ರಸ್ತೆ ದಾಟುವ ವೇಳೆ ಬೊಲೆರೊ ವಾಹನವು ಯುವಕನ ಮೈಮೇಲೆ ಹರಿದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಜಿನ ಟಾಕೀಸ್ ಮುಂಭಾಗ ಈ ಘಟನೆ ಸಂಭವಿಸಿದೆ. ಬೆಳ್ಳೂಡಿ ಗ್ರಾಮದ ನವೀನ್(20) ಸಾವನ್ನಪ್ಪಿದ ಯುವಕ. ಕೆಲಸ ಮುಗಿಸಿ ಮನೆಗೆ ನವೀನ್ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ನವೀನ್ ಮೈಮೇಲೆ ಬೊಲೆರೊ ವಾಹನದ ಚಕ್ರಗಳು ಹರಿದಿದ್ದು, ನವೀನ್ ಸ್ಥಳದಲ್ಲೇ ಕೊನೆಯುಸಿರೆಳೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
PublicNext
19/04/2022 09:46 pm