ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉರುಳಿ ಬಿದ್ದ ತರಬೇತಿ ವಿಮಾನ: ಮಹಿಳಾ ಪೈಲಟ್ ಪ್ರಾಣಾಪಾಯದಿಂದ ಪಾರು

ಬೆಂಗಳೂರು: ನಗರದ ಜಕ್ಕೂರು ಏರೋಡ್ರೋಮ್‌ನಲ್ಲಿ ಭಾನುವಾರ ತರಬೇತಿ ವಿಮಾನವೊಂದು ಉರುಳಿ ಬಿದ್ದಿದೆ. ಸಂಜೆ 5.45 ಸುಮಾರಿನಲ್ಲಿ ತರಬೇತಿ ವಿಮಾನ ಆಕಾಶಕ್ಕೆ ಹಾರಲು ಕೆಲ ಕ್ಷಣಗಳು ಬಾಕಿ ಇರುವಾಗಲೇ ನಾಯಿಯೊಂದು ಅಡ್ಡ ಬಂದಿದೆ. ನಾಯಿಗೆ ಡಿಕ್ಕಿ ಹೊಡೆದ ವಿಮಾನ ರನ್ ವೇನಲ್ಲಿ ಉರುಳಿ ಪಕ್ಕಕ್ಕೆ ಬಿದ್ದಿತು ಎನ್ನಲಾಗಿದೆ.

ಅಗ್ನಿ ಏರೋಸ್ಪೇಸ್ 185 ಏರೋಕ್ರಾಫ್ಟ್ ವಿಮಾನ ಇದಾಗಿದೆ. ಈ ಘಟನೆಯಲ್ಲಿ ಮಹಿಳಾ ಪೈಲೆಟ್ ಚೆರ್ಲಿ ಆ್ಯನ್ ಸ್ಟಿಮ್ಸ್‌ಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ. ಮತ್ತೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ಡಿಜಿಸಿಎ ತನಿಖೆ ನಡೆಸುತ್ತಿದೆ.

Edited By : Nagaraj Tulugeri
PublicNext

PublicNext

18/04/2022 08:33 am

Cinque Terre

42.08 K

Cinque Terre

0

ಸಂಬಂಧಿತ ಸುದ್ದಿ