ಹೈದ್ರಬಾದ್:ಬ್ಯಾಂಕ್ ಸಿಬ್ಬಂದಿಯ ಮರೆವಿನಿಂದಾಗಿಯೇ ಮರೆವಿನ ಖಾಯಿಲೆ ಇರೋ ಹಿರಿಯ ವ್ಯಕ್ತಿ ಬ್ಯಾಂಕ್ ನಲ್ಲಿಯೇ 18 ಗಂಟೆಗಳ ಕಾಲ ಲಾಕ್ ಆದ ಘಟನೆ ನಡೆದಿದೆ.
ಹೌದು. ಬ್ಯಾಂಕ್ ಲಾಕರ್‌ನಲ್ಲಿ ಲಾಕ್ ಆದ ವ್ಯಕ್ತಿ ಹೆಸರು ಕೃಷ್ಣ ರೆಡ್ಡಿ ಅಂತ. ಈ ಹಿರಿಯ ವ್ಯಕ್ತಿಗೆ ಮರೆವಿನ ಖಾಯಿಲೆ ಇದೆ. ವಯಸ್ಸು ಕೂಡ 89 ಆಗಿದೆ.ಇಷ್ಟಾದರೂ ಬ್ಯಾಂಕ್ ಲಾಕರ್ ಓಪನ್ ಮಾಡಲು ಬ್ಯಾಂಕ್ ಗೆ ಬಂದಿದ್ದರು.
ಆದರೆ, ಬ್ಯಾಂಕ್ ಸಿಬ್ಬಂದಿ ಹಿರಿಯ ವ್ಯಕ್ತಿ ಲಾಕರ್ ರೂಮ್ ನಲ್ಲಿದ್ದಾರೆ ಅನ್ನೋದನ್ನ ಮರೆತು, ಬ್ಯಾಂಕ್ ಲಾಕ್ ಮಾಡಿ ಹೋಗಿದ್ದಾರೆ. ಇದರಿಂದ 18 ಗಂಟೆಗಳ ಕಾಲ ಹಿರಿಯ ವ್ಯಕ್ತಿ ಬ್ಯಾಂಕ್ ನಲ್ಲಿಯೇ ಲಾಕ್ ಆಗಿದ್ದಾರೆ. ಸದ್ಯ ಪೊಲೀಸರು ಹಿರಿಯ ವ್ಯಕ್ತಿಯನ್ನ ರಕ್ಷಿಸಿದ್ದಾರೆ. ಆಸ್ಪತ್ರೆಗೂ ಕಳಿಸಿಕೊಟ್ಟಿದ್ದಾರೆ.
PublicNext
29/03/2022 05:21 pm