ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಂಧ್ರದ ಚಿತ್ತೂರು ಬಳಿ ಬಸ್ ಅಪಘಾತ: 7 ಸಾವು, 45 ಮಂದಿಗೆ ಗಾಯ

ಅಮರಾವತಿ: ಆಂಧ್ರ ಪ್ರದೇಶದ ಚಿತ್ತೂರು ಬಳಿ ಪ್ರಪಾತಕ್ಕೆ ಬಸ್ ಉರುಳಿದ ಪರಿಣಾಮ 7 ಜನ ಮೃತಪಟ್ಟಿದ್ದಾರೆ. ಹಾಗೂ 45 ಮಂದಿ ಗಾಯಗೊಂಡಿದ್ದಾರೆ.

ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಚಾಲಕನ ಅಜಾಗರೂಕತೆಯೇ ಈ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ತಿರುಪತಿಯಿಂದ 25 ಕಿ.ಮೀ ದೂರದಲ್ಲಿರುವ ಭಕರಪೇಟ್ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ 52 ಜನ ಪ್ರಯಾಣಿಸುತ್ತಿದ್ದರು ಘಟ್ಟ ಪ್ರದೇಶದಲ್ಲಿ ಅಪಘಾತ ನಡೆದಿದೆ.

Edited By : Nagaraj Tulugeri
PublicNext

PublicNext

27/03/2022 09:35 am

Cinque Terre

78.7 K

Cinque Terre

0

ಸಂಬಂಧಿತ ಸುದ್ದಿ