ಚೆನ್ನೈ: ಕಾಲಿವುಡ್‌ನ ನಾಯಕ ನಟ ಸಿಂಬು ಹೆಸರಿನಲ್ಲಿ ನೋಂದಣಿ ಆಗಿರೋ ಕಾರ್ ಅಪಘಾತ ಆಗಿದೆ. ಇದರ ಪರಿಣಾಮ 70 ವರ್ಷದ ವಿಕಲ ಚೇತನ ವೃದ್ಧ ವ್ಯಕ್ತಿ ಮೃತಪಟ್ಟಿದ್ದಾರೆ.
ಹೌದು. ಈ ಘಟನೆ ನಡೆದು ಈಗಾಗಲೇ ಎರಡು ದಿನಗಳೇ ಕಳೆದಿವೆ. ಆದರೆ ಈಗ ಇದು ಬೆಳಕಿಗೆ ಬಂದಿದೆ. ಕಾರ್‌ನಲ್ಲಿ ನಟ ಸಿಂಬು ಇರಲಿಲ್ಲ. ಸಿಂಬು ತಂದೆ ನಟ ರಾಜೇಂದ್ರ ಹಿಂಬದಿಯ ಸೀಟಿನಲ್ಲಿದ್ದರು. ಮೊಮ್ಮಗನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು.
ಈ ವೇಳೆನೆ ಸಿಂಬು ಕಾರು ವಿಕಲ ಚೇತನ ವೃದ್ಧನಿಗೆ ಡಿಕ್ಕಿ ಹೊಡೆದಿದೆ. ಇದರಿಂದ ವೃದ್ಧ ಗಾಯಗೊಂಡಿದ್ದಾರೆ. ಕೂಡಲೇ ಸಿಂಬು ತಂದೆ ಆ ವೃದ್ಧನನ್ನ ಆಸ್ಪತ್ರೆಗೂ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಿಸಿದೇ ವೃದ್ಧ ವ್ಯಕ್ತಿ ಮೃತಪಟ್ಟಿದ್ದಾರೆ.
ಈ ಸಂಬಂಧ ಪೊಲೀಸರು ಸಿಂಬು ಡ್ರೈವರ್ ಸೆಲ್ವಂ ನನ್ನ ಅರೆಸ್ಟ್ ಮಾಡಿದ್ದಾರೆ. ವಿಚಾರಣೆಗೂ ಒಳಪಡಿಸಿದ್ದಾರೆ. ಆ ದಿನ ನಡೆದ ಅಪಘಾತದ ಸಿಸಿಟಿ ವೀಡಿಯೋ ಕೂಡ ಈಗ ಹೊರ ಬಿದ್ದಿದೆ.
PublicNext
24/03/2022 02:22 pm